16. ಕಾರಣಮಸ್ತ್ಯವ್ಯಕ್ತಂ ಪ್ರವರ್ತತೇ ತ್ರಿಗುಣತ: ಸಮುದಾಯಾಶ್ಚ ।
ಪರಿಣಾಮತಃ ಸಲಿಲವತ್ ಪ್ರತಿ ಪ್ರತಿ ಗುಣಾಶ್ರಯ ವಿಶೇಷಾತ್ ।।
ಅವ್ಯಕ್ತವು ಕಾರಣವು ಹೇಗೆಂದರೆ ಮಹದಾದಿಗಳು ಅದರಲ್ಲಿ ಲಯ ಹೊಂದುವುದರಿಂದ ಅವ್ಯಕ್ತವು ಕಾರಣವು. ಅದು ಏಕೆಂದರೆ ? ಪ್ರಧಾನದಿಂದ ಸೃಷ್ಟಿಯಾದ ವ್ಯಕ್ತವು ಕೂಡ ತ್ರಿಗುಣಯುಕ್ತವಾದರಿಂದ. ತ್ರಿಗುಣಯುಕ್ತವಾದರಿಂದ ಏನು ಸಿದ್ಧವಾಗುತ್ತದೆ ? ಸತ್ವ ರಜ ತಮೋಗುಣಗಳು ಸಾಮ್ಯಾವಸ್ಥೆಯಲ್ಲಿದರೆ ಅದು ಪ್ರಧಾನವಾಗುವುದು. ಆ ಸಾಮ್ಯಾತೆ ನಷ್ಟವಾದರೆ ಅದು ಸೃಷ್ಟಿಯಾಗುತ್ತದೆ.
ಗಂಗೆಯು ಶಿವನ ಶಿರದಿಂದ ಬೀಳುವಾಗ ಮೂರು ಧಾರೆಯಾಗಿದ್ದರು ಭೂಮಿಗೆ ಬರುವಾಗ ಮೂರು ಧಾರೆಯು ಒಂದಾಗಿ ಬರುವಂತೆ, ವ್ಯಕ್ತವು ಅವ್ಯಕ್ತದಿಂದ ತ್ರಿಗುಣಯುಕ್ತವಾಗಿ ಸಮ್ಯಕ್ ಉದಯವಾಗುತ್ತದೆ. ಹಾಗಾದರೆ ಅವ್ಯಕ್ತವು ಒಂದು ಅದರಿಂದ ಜನಿತವಾದ ವ್ಯಕ್ತವು ನಾನಾ ರೂಪ ಧಾರಣೆ ಹೇಗೆ ಮಾಡಲು ಸಾಧ್ಯ ? ಇದು ದೋಷವಲ್ಲ,ಹೇಗೆ ಆಕಾಶದಿಂದ ಬೀಳುವ ಮಳೆಯ ನೀರು ಅದು ಬೀಳುವ ಜಾಗದ ಮೇಲೆ ವಿವಿಧ ರೂಪಧಾರಣೆ ಮಾಡುತ್ತದೆ.ಗಂಗೆಯಲ್ಲಿ ಬಿದ್ದರೆ ಅದು ಗಂಗೆಯಾಗುತ್ತದೆ,ಸಮುದ್ರದಲ್ಲಿ ಬಿದ್ದರೆ ಆ ನೀರು ಉಪ್ಪಾಗುತ್ತದೆ.ಅದೇ ರೀತಿ ಅವ್ಯಕ್ತವಾದ ಪ್ರಧಾನದಲ್ಲಿ ವಿವಿಧತೆವಿಲ್ಲದಿದ್ದರೂ, ವ್ಯಕ್ತದಲ್ಲಿರುಬಹುದು.
ಪುರುಷನ ಅಸ್ತಿತ್ವತೆಯು ಮುಂದಿನ ಕಾರಿಕೆಯಲ್ಲಿ ಸಿದ್ಧವಾಗುತ್ತದೆ.
17. ಸಂಘಾತ ಪರಾರ್ಥತ್ವಾತ್ ತ್ರಿಗುಣಾದಿವಿಪರ್ಯಯಾದ್ ಅಧಿಷ್ಠಾನಾತ್ ।
ಪುರುಷೋsಸ್ತಿ,ಭೋಕ್ತ್ರಭಾವತ್ ಕೈವಲ್ಯಾರ್ಥಂ ಪ್ರವೃತ್ತೇಶ್ಚ ।।
ಪೂರ್ವದಲ್ಲಿ ಹೇಳಿದಂತೆ ವ್ಯಕ್ತ-ಅವ್ಯಕ್ತ-ಜ್ಞಾ, ಇದರ ಜ್ಞಾನದಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ,ಅದರಲ್ಲಿ ೫ ಕಾರಣಗಳಿಂದ ವ್ಯಕ್ತ-ಅವ್ಯಕ್ತ ಸಿದ್ಧವಾಗಿದೆ ಮತ್ತು ಅದರ ಸರೂಪವನ್ನು ವಿರೂಪವನ್ನು ಹೇಳಿದಾಗಿದೆ. ಪುರುಷನೊಂದಿಗೆ ಅವ್ಯಕ್ತದ ಸಮಾನತೆಯನ್ನು ತಿಳಿಸಿದಾಗಿದೆ.ಅವ್ಯಕ್ತದಂತೆ ಪುರುಷನು ಸೂಕ್ಷ್ಮವು. ಈ ಅನುಮಾನದಿಂದ ಏನು ಸಿದ್ಧವಾಯಿತೋ ಅದರ ವಿಚಾರ ಮಾಡೋಣ.
ಪುರುಷನಿದ್ದಾನೆ.ಅದು ಹೇಗೆಂದರೆ ಸಂಬಂಧವು ಬೇರೆಯವರಿಗಾಗಿಯೇ ಇರಬೇಕು.ಯಾವ ಸಂಬಂಧವೆಂದರೇ ?ಪ್ರಕೃತಿಯು ಅಚೇತನವಾದರಿಂದ, ಸೃಷ್ಠಿಯೇನಿದೆ ಅದು ಮಹದಾದಿಗಾಗಿ ಅಲ್ಲ ಪುರುಷನಿಗಾಗಿ ಎಂದು ಅನುಮಾನದಿಂದ ಹೇಳಬೇಕಾಗುವುದು. ಉದಾಹರಣೆಗೆ ಮಂಚವು, ಹಾಸಿಗೆ, ಹೊದಕೆ, ಅದಕ್ಕಾಗಿ ಅಲ್ಲ ಬೇರೆಯವರಿಗಾಗಿ. ಹಾಗೆಯೇ ಪ್ರಧಾನವು, ಪಂಚಭೂತದಿಂದಾದ ಶರೀರವು, ಮಹದಾದಿಗಳು ಪುರುಷನಿಗಾಗಿಯೇ.
ಮತ್ತೊಂದು ಕಾರಣ(ಹೇತು) ತ್ರಿಗುಣದ ವಿಪರೀತವಾಗಿರುವುದು.ಹಿಂದಿನ ಶ್ಲೋಕ 11 ರಲ್ಲಿ ಹೇಳಿದಂತೆ ಪುರುಷನು ತ್ರಿಗುಣರಹಿತನೂ,ವಿವೇಕಿಯೂ ಇತ್ಯಾದಿ ಅವ್ಯಕ್ತದ ವಿಪರೀತ ಗುಣವನ್ನು ಹೊಂದಿರುತ್ತದೆ.
ಅಧಿಷ್ಠಾನಾತ್:
ಓಡಲು ಶಕ್ತ್ಯವಾದ ಕುದುರೆಗಳನ್ನು ರಥಕ್ಕೆ ಕಟ್ಟಿದರೂ ಕೂಡ ಅಧಿಷ್ಠಾನದಂತಿರುವ ರಥದ ಚಾಲಕ ಇಲ್ಲದೆ ಹೋದರೆ, ಅದು ಗುರಿ ಮುಟ್ಟಲು ಸಾಧ್ಯವಿಲ್ಲ.ಅದೇ ರೀತಿ ಪುರುಷನ ಅಧಿಷ್ಠಾನವು ಈ ಶರೀರದಲ್ಲಿ ಅವಶ್ಯ.
ಭೋಕ್ತ್ರನಾಗಿರುವುದರಿಂದ:
ಷಡ್ ರಸಯುಕ್ತವಾದ ಅನ್ನವನ್ನು ಅಡಿಗೆಯವನು ಮಾಡಿದ್ದರೂ ಅದನ್ನು ಭೋಗಿಸುವವನು ಬೇರೆಯಿರುವಂತೆ. ಮಹದಾದಿಗಳನ್ನು ಅನುಭವಿಸಲೂ ಪುರುಷಾನಿರಬೇಕಾಗುತ್ತದೆ.
ಕೈವಲ್ಯಕ್ಕಾಗಿ:
ಮೋಕ್ಷಕ್ಕಾಗಿ ಪ್ರಯತ್ನಿಸುವವನು ಪ್ರಧಾನದ ಮೋಕ್ಷಕ್ಕಾಗಿ ಅಲ್ಲತನಗಾಗಿ, ಅದರಿಂದ ಮೋಕ್ಷಕ್ಕಾಗಿ ಪ್ರಯತ್ನಿಸುವ ಪುರುಷನಿರಬೇಕೆಂದು ಅನುಮಾನಿಸಬಹುದು.
ಈ ಎಲ್ಲಾ ಕಾರಣಗಳಿಂದ ಪುರುಷನಿದ್ದಾನೆ ಎಂದು ಅವನು ದೇಹದಿಂದ ಪೃತಕ್ ಎಂದು ಸಿದ್ಧವಾಗುತ್ತದೆ.ಆತ್ಮನು ಒಬ್ಬನಿದ್ದು ಎಲ್ಲ ಶರೀರಾದಲ್ಲಿರುವವನೋ ? ಅಥವಾ ಪ್ರತಿಯೊಂದು ಜೀವದಲ್ಲಿ ಬೇರೆ ಬೇರೆಯಾಗಿರುವುದೋ ? ಎಂದರೆ ಪುರುಷವೆಂಬುದು ಏಕವೋ ಅನೇಕವೋ ?
18. ಜನನ ಮರಣ ಕಾರಣಾನಾಮ್ ಪ್ರತಿನಿಯಮಾದ್ ಅಯುಗಪತ್ ಪ್ರವೃತ್ತೇಶ್ಚ ।
ಪುರುಷ ಬಹುತ್ತ್ವಂ ಸಿದ್ಧಮ್ ತ್ರೈಗುಣ್ಯ ವಿಪರ್ಯಯಾಶ್ಚೈವ ।।
ಜನನ ಮರಣ ಮತ್ತು ಕರಣಗಳು .ಅದರ ನಿಯಮಗಳು ಪ್ರತಿಯೊಬ್ಬನಿಗೂ ಭಿನ್ನವಾಗಿರುವುದರಿಂದ, ಪುರುಷನು ನಾನಾ ಎಂದು ಸಿದ್ಧವಾಗುತ್ತದೆ.
ಪುರುಷನು ಒಬ್ಬನೇಯಾಗಿದ್ದರೆ ಒಬ್ಬನ ಜನ್ಮವಾದರೆ ಎಲ್ಲರ ಜನ್ಮವಾಗಬೇಕು,ಒಬ್ಬನ ಮರಣವಾದರೆ ಎಲ್ಲರ ಮರಣವಾಗಬೇಕು, ಒಬ್ಬನ ಇಂದ್ರಿಯ ಘಾತವಾದರೆ ಎಲ್ಲರ ಇಂದ್ರಿಯ ಘಾತವಾಗಬೇಕು,ಹಾಗಿಲ್ಲದಿದ್ದರಿಂದ ಪುರುಷನ ಬಹುತ್ವ ಸಿದ್ಧವಾಗುತ್ತದೆ.
ಮತ್ತೊಂದು ಕಾರಣವೇನೆಂದರೆ ‘ಅಯುಗಪತ್’.ಯುಗಪತ್ ಎಂದರೆ ಒಂದೇ ಕಾಲ/ಏಕಕಾಲ ಎಂದರ್ಥ.ಒಬ್ಬನು ಧರ್ಮದಲ್ಲಿ ಪ್ರವೃತ್ತಿ ಹೊಂದಿದ್ದರೆ, ಇನ್ನೊಬ್ಬನು ಅರ್ಥಮದಲ್ಲಿ,ಮತ್ತೊಬ್ಬನು ವೈರಾಗ್ಯದಲ್ಲಿ ಪ್ರವೃತ್ತಿ ಹೊಂದಿದ್ದಿರುತ್ತಾನೆ. ಈ ರೀತಿ ಯುಗಪತ್ ಪ್ರವೃತ್ತಿ ಇಲ್ಲದಿರುವುದರಿಂದ ಪುರುಷನ ಬಹುತ್ವ ಸಿದ್ಧವಾಗುತ್ತದೆ.
ತ್ರೈಗುಣ್ಯ ವಿಪರ್ಯಾಯಾದಿಂದಲೂ ಪುರುಷನ ಬಹುತ್ವ ಸಿದ್ಧವಾಗುತ್ತದೆ. ಸಾಮಾನ್ಯವಾಗಿ ಒಬ್ಬ ಸಾತ್ವಿಕನು ಸುಖವಾಗಿಯೂ,ರಜೋಗುಣಯುಕ್ತನು ದುಃಖದಲ್ಲಿಯೂ,ತಮೋಗುಣಿಯು ಮೋಹದಲ್ಲಿರುವುದು ಕಂಡುಬರುತ್ತದೆ. ಆದ್ದರಿಂದ ಪುರುಷನು ನಾನಾ.
ಪುರುಷನ ಬಹುತ್ವವು ಸಿದ್ಧವಾಯಿತು.ಪುರುಷನು ಅರ್ಕತನೆಂದು ಹೀಗೆ
ಸಿದ್ಧಮಾಡಬಹುದು ?
19.ತಸ್ಮಾಚ್ಚ ವಿಪರ್ಯಯಾಸಾತ್ ಸಿದ್ಧಂ ಸಾಕ್ಷಿತ್ವಮಸ್ಯ ಪುರುಷಸ್ಯ ।
ಕೈವಲ್ಯ0 ಮಾಧ್ಯಸ್ಥ0 ದ್ರಷ್ಟತ್ವಮಕರ್ತೃಭಾವಶ್ಚ ।।
ತ್ರೈಗುಣ್ಯ ವಿಪರ್ಯಯಾದಿಂದಲೂ ಪುರುಷನು ತ್ರಿಗುಣಿಯು ಅಲ್ಲ,ವಿಷಯಿಯೂ ಅಲ್ಲವೆಂದು ಪೂರ್ವ ಶ್ಲೋಕದಲ್ಲೇ ಸಿದ್ಧವಾಗಿದೆ. ಸತ್ವ, ರಜಸ್ ಮತ್ತು ತಮಸ್ಸಿನ ಕಾರ್ಯವೇನಿದೆ ಅದರ ಸಾಕ್ಷಿ ರೂಪದಲ್ಲಿ ಪುರುಷನಿರುತ್ತಾನೆಂದು ಸಿದ್ಧವಾಗಿದೆ. ಗುಣವೇನಿದೆ ಅದು ಕರ್ತ,ಅಂದರೆ ಪ್ರವೃತ್ತಿಯುಕ್ತವಾಗಿರುತ್ತದೆ. ಆದರೆ ಸಾಕ್ಷಿಯು ಪ್ರವೃತ್ತಿ ಆಗಲಿ ನಿವೃತ್ತಿಯಲ್ಲಿ ಆಗಲಿ ಮಾಡುವುದಿಲ್ಲ.ಮಧ್ಯಸ್ವರೂಪದಲ್ಲಿರು ವುದರಿಂದ ಅದು ಮಾಧ್ಯಸ್ಥಮ್. ಪುರುಷನು ಪರಿವ್ರಾಜತನಂತೆ ಮಾಧ್ಯಸ್ಥನಾಗಿರುತ್ತಾನೆ. ಯಾವ ಕಾರಣದಿಂದ ಪುರುಷನು ಸಾಕ್ಷಿ,ಮಾಧ್ಯಸ್ಥನಾಗಿರುವನೋ ಅದೇ ಕಾರಣದಿಂದ ಪುರುಷನು ದ್ರಷ್ಟನಾಗಿರುತ್ತಾನೆ. ಆದರಿಂದ ಪುರುಷನು ಅಕರ್ತ.
ಪುರುಷನು ಅಕರ್ತನಾಗಿದ್ದರೆ ಹೇಗೆ ಧರ್ಮ-ಅಧರ್ಮದ ಅಧ್ಯವಸಾಯ(ನಿಶ್ಚಯ) ಮಾಡುತ್ತಾನೆ.
20. ತಸ್ಮಾತ್ ತತ್ ಸಂಯೋಗಾದಚೇತನ0 ಚೇತನಾದಿವಲಿಂಗಮ್ ।
ಗುಣಕರ್ತೃತ್ವೇsಪಿ ತಥಾ ಕರ್ತೇವ ಭವತ್ಯುದಾಸೀನ: ।।
ಇಲ್ಲಿ ಪುರುಷನು ಚೇತನಯುಕ್ತನು.ಇಂತಹ ಪುರುಷನ ಸಂಯೋಗದಿಂದ ಮಹದಾದಿಗಳು ಚೇತನದಂತೆ ಭಾಸವಾಗುತ್ತದೆ.
ಉದಾ:ಮಡಿಕೆಯು ನೀರಿನೊಂದಿಗೆ ಇದ್ದಾಗ ಶೀತವಾಗಿಯೂ ಬೆಂಕಿಯೊಂದಿಗೆ ಸಂಪರ್ಕವಾದಾಗ ಉಷ್ಣವಾಗಿಯೂ ಇರುವಂತೆ.
ಆದ್ದರಿಂದ ಗುಣವೇ ಧರ್ಮ-ಅಧರ್ಮದ ಅಧ್ಯವಸಾಯ(ನಿಶ್ಚಯ) ಮಾಡುತ್ತದೆ ಚೇತನದ ಸಂಪರ್ಕದಿಂದ, ಲೋಕದಲ್ಲಿ ಪುರುಷನು ಒಂದು, ನಿಂತನು ಎಂದು ವ್ಯವಹಾರವಾದರೂ. ಸತ್ಯವಾಗಿ ನೋಡಿದರೆ ಪುರುಷನು ಅರ್ಕತನು. ಗುಣದ ಸಂಬಂಧದಿಂದ ಈ ರೀತಿಯ ದೋಷಗಳು ಪುರುಷನಿಗೆ ಬರುತ್ತದೆ.
ಪುರುಷನು ಗುಣದ ಸಂಬಂಧದಿಂದ ಅರ್ಕತನಾಗಿದ್ದರೂ ಕರ್ತನಂತೆ ಆಗುತ್ತಾನೆ.ಇದು ಹೇಗೆ ? ಇದಕ್ಕೆ ಒಂದು ದೃಷ್ಟಾಂತವನ್ನು ಹೇಳಬಹುದು. ಒಬ್ಬ ಸಜ್ಜನನು(ಅಚೋರನು) ಚೋರರೊಂದಿಗೆ ಇದ್ದರೆ ಅವನನ್ನು ಚೋರನೆಂದೇ ಭಾವಿಸಲಾಗುವುದು. ಇದೆ ರೀತಿ ಪುರುಷನ ತ್ರೈಗುಣ್ಯ ಸಂಬಂಧದಿಂದ ಅರ್ಕತನಾಗಿದ್ದರೂ ಕರ್ತನಂತೆ ಆಗುತ್ತಾನೆ.
ವ್ಯಕ್ತ-ಅವ್ಯಕ್ತ-ಜ್ಞಾ ಇದರ ಸಂಪೂರ್ಣ ಜ್ಞಾನದಿಂದ ಮೋಕ್ಷ ಪ್ರಾಪ್ತಿ ಆಗುವುದು, ಆದರೆ ಪುರುಷನು ಯಾವ ಕಾರಣದಿಂದ ಪ್ರಧಾನದೊಂದಿಗೆ ಸಂಯೋಗ ಹೊಂದುತ್ತಾನೆ ಮತ್ತು ಹೇಗೆ ಸಂಯೋಗ ಹೊಂದುತ್ತಾನೆ ?