ಫಲ ಶ್ರುತಿ
71. ಏತತ್ ಪವಿತ್ರಂ ಅಗ್ರ್ಯ೦ ಮುನಿರಾಸೃರಯೇs ನುಕಂಪಯಾ ಪ್ರದದೌ ।
ಆಸುರಿರಪಿ ಪಂಚಶಿಖಾಯ ತೇನ ಚ ಬಹುಧಾ ಕೃತಂ ತಂತ್ರಮ್ ।।
ಈ ಅತ್ಯುತ್ತಮವಾದ ಜ್ಞಾನವನ್ನು ಕಪಿಲರು ಆಸುರಿ ಮುನಿವರ್ಯರಿಗೆ ಪ್ರಧಾನಿಸಿದರು. ಅವರು ಪಂಚಶಿಖಾಚಾರ್ಯರಿಗೆ ಕೊಟ್ಟರು. ಪಂಚಶಿಖಾಚಾರ್ಯರಿಂದ ಈ ದರ್ಶನವು ವಿಸ್ತಾರ ಗೊಂಡಿತು.
72.ಶಿಷ್ಯ-ಪರಂಪರಯಾಗತಂ ಈಶ್ವರ ಕೃಷ್ಣೇನ ಚೈತದಾರ್ಯಾಭಿ: ।
ಸಂಕ್ಷಿಪ್ತ೦ ಆರ್ಯಮತಿನಾ ಸಮ್ಯಗ್ ವಿಜ್ಞಾನ ಸಿದ್ಧಾಂತ೦ ।।
ಗುರು-ಶಿಷ್ಯ ಪರಂಪರೆಯಿಂದ ಬಂದಿರುವಂತಹ ಈ ತತ್ವವನ್ನು ಈಶ್ವರ ಕೃಷ್ಣನಾದ ನಾನು ಆರ್ಯ ರೂಪವಾಗಿ ಛಂದೋ ಬದ್ಧವಾಗಿ ಶ್ಲೋಕ ರೂಪದಲ್ಲಿ ಸಂಕ್ಷಿಪ್ತವಾಗಿ, ಸ್ಪಷ್ಟವಾಗಿ ಸಮ್ಯಕ್ ಜ್ಞಾನಯುಕ್ತವಾದ ಗ್ರಂಥವನ್ನು ಬರೆದಿರುವೆನು.
73. ಸಪ್ತತ್ಯಾಂ ಕಿಲಯೇ sರ್ಥಾಸ್ತೇsರ್ಥಾ: ಕೃತ್ನಸ್ಯ ಷಷ್ಠಿ ತಂತ್ರಸ್ಯ ।
ಆಖ್ಯಾಯಿಕಾ-ವಿರಹಿತಾ: ಪರವಾದ-ವಿವರ್ಜಿತಾಶ್ಚಾಮಿ ।।
ನಿಶ್ಚಯ ರೂಪವಾದ ೭೦ ಕಾರಿಕೆಗಳು ಷಷ್ಠಿ ತಂತ್ರದಲ್ಲಿರುವ ವಿಷಯದ ಸಾರವಾಗಿದೆ. ಯಾವುದೇ ರೀತಿಯ ಉದಾಹರಣ ಕಥೆಯನ್ನು ಹೇಳಿದೆ ಪರವಾದ ಖಂಡನೆಯನ್ನು ಮಾಡದೆ, ಈ ಗ್ರಂಥವನ್ನು ಬರೆದಿರುತ್ತೇನೆ.