Adi Tarka Parama pujya Sri Ramakrishna Guruji for sake of beginners has simplified Tarka Sangraha and presented in a simple lucid manner. I have attempted in following pages to explain Adi Tarka based on his lectures. Tarka is a comprehensive text for both Nyaya and vaisheshika school. The premise of tarka sangrah is how…
Yoga Darshana
Introduction The Indian Philosophical system comprises of Six Darshanas Viz. Sankhya, Yoga, Nyaya, Vaisheshika, Purva mimamsa and uttara mimamsa. The text Yoga sutra is authored by maharshi Pathanjali, this text is useful for the people who practice vedanta as well. This school of thought is linked to Sankhya school of thought. Sankhya deals with the…
ಸಾಂಖ್ಯ ಕಾರಿಕ 71-73
ಫಲ ಶ್ರುತಿ 71. ಏತತ್ ಪವಿತ್ರಂ ಅಗ್ರ್ಯ೦ ಮುನಿರಾಸೃರಯೇs ನುಕಂಪಯಾ ಪ್ರದದೌ । ಆಸುರಿರಪಿ ಪಂಚಶಿಖಾಯ ತೇನ ಚ ಬಹುಧಾ ಕೃತಂ ತಂತ್ರಮ್ ।। ಈ ಅತ್ಯುತ್ತಮವಾದ ಜ್ಞಾನವನ್ನು ಕಪಿಲರು ಆಸುರಿ ಮುನಿವರ್ಯರಿಗೆ ಪ್ರಧಾನಿಸಿದರು. ಅವರು ಪಂಚಶಿಖಾಚಾರ್ಯರಿಗೆ ಕೊಟ್ಟರು. ಪಂಚಶಿಖಾಚಾರ್ಯರಿಂದ ಈ ದರ್ಶನವು ವಿಸ್ತಾರ ಗೊಂಡಿತು. 72.ಶಿಷ್ಯ-ಪರಂಪರಯಾಗತಂ ಈಶ್ವರ ಕೃಷ್ಣೇನ ಚೈತದಾರ್ಯಾಭಿ: । ಸಂಕ್ಷಿಪ್ತ೦ ಆರ್ಯಮತಿನಾ ಸಮ್ಯಗ್ ವಿಜ್ಞಾನ ಸಿದ್ಧಾಂತ೦ ।। ಗುರು-ಶಿಷ್ಯ ಪರಂಪರೆಯಿಂದ ಬಂದಿರುವಂತಹ ಈ ತತ್ವವನ್ನು ಈಶ್ವರ ಕೃಷ್ಣನಾದ ನಾನು ಆರ್ಯ ರೂಪವಾಗಿ ಛಂದೋ…
ಸಾಂಖ್ಯ ಕಾರಿಕ 66-70
66. ರಂಗಸ್ಥ ಇತ್ಯುಪೇಕ್ಷಕ ಏಕ: ದೃಷ್ಟಾ ಅಹಂ ಇತಿ ಉಪರಮತಿ ಏಕಾ । ಸತಿ ಸಂಯೋಗೇs ಪಿ ತಯೋ: ಪ್ರಯೋಜನಂ ನಾಸ್ತಿ ಸರ್ಗಸ್ಯ ।। ರಂಗದಲ್ಲಿ ಕುಳಿತಿರುವ ಪುರುಷ ಉಪೇಕ್ಷಕನಂತೆ ನೋಡುತ್ತಿರುವನು ಮತ್ತು ಅವನು ಏಕ(ಒಬ್ಬನೇ) . ಪ್ರಕೃತಿಯು ತನ್ನನ್ನು ಪುರುಷನು ಕಂಡನು ಎಂದು ತಿಳಿದು ಕೊಳ್ಳುತ್ತಾಳೆ. ನೋಡುವ ಪುರುಷನಿದ್ದು, ನೋಡುವ ವಿಷಯವಿದ್ದು, ಎರಡರ ಸಂಯೋಗವಿದ್ದರೂ ಕೂಡ ಈ ಸೃಷ್ಟಿಯ ಏನು ಪ್ರಯೋಜನವಿಲ್ಲ. ಇಲ್ಲಿ ಕೆಲವು ವಿಚಾರವನ್ನು ಗಮನದಲ್ಲಿರಿಸಬೇಕು. ನೋಡುವ ಪುರುಷನು ಒಬ್ಬನೇ ಎಂದರೆ ಯಾವ ಪುರುಷನಿಗೆ…
ಸಾಂಖ್ಯ ಕಾರಿಕ 61-65
61. ಪ್ರಕೃತೆ: ಸುಕುಮಾರತರಂ ನ ಕಿಂಚದ್ ಅಸ್ತಿತಿ ಮೇ ಮತಿರ್ಭವತಿ । ಯಾ ದೃಷ್ಟಾಸ್ಮೀತಿ ಪುನರ್ನದರ್ಶನ ಮುಪೈತಿ ಪುರುಷಸ್ಯ ।। ಈ ಲೋಕದಲ್ಲಿ ಸುಖ ಕೊಡುವಂತಹ ಯಾವುದೇ ರೀತಿಯ ವಸ್ತುವಿಲ್ಲ ಎಂಬ ಮತಿಯು ಉತ್ಪನ್ನವಾದಾಗ ಪುರುಷನಿಗೆ ಪ್ರಕೃತಿಯ ನಿಜ ಸ್ವರೂಪದ ಅರಿವು ಉಂಟಾದಮೇಲೆ, ಪ್ರಕೃತಿಯು ಪುನಃ ದರ್ಶನವನ್ನು ಕೊಡುವುದಿಲ್ಲ, ನಿವೃತ್ತಿ ಹೊಂದುವಳು. ಲೋಕ ರೂಢಿ ಇರುವಂತೆ ಈ ಪುರುಷನು ಮುಕ್ತನು ,ಇವನು ಸಂಸಾರಿ ಎಂದೆಲ್ಲಾ ಹೇಳುತ್ತಾರೆ? ಇದು ಹೇಗೆ? 62.ತಸ್ಮಾದ್ ನ ಬಧ್ಯತೆನಾಪಿಮುಚ್ಯತೆ ನಾಪಿ ಸಂಸರತಿ ಕಶ್ಚಿತ್…
ಸಾಂಖ್ಯ ಕಾರಿಕ 56-60
56. ಇತ್ಯೇಷ ಪ್ರಕೃತಿಕೃತೋ ಮಹದಾದಿ ವಿಶೇಷ ಭೂತ ಪರ್ಯಂತಃ। ಪ್ರತಿ ಪುರುಷ ವಿಮೋಕ್ಷಾಯ ಸ್ವಾರ್ಥ ಇವ ಪರಾರ್ಥ ಆರಂಭ: ।। ‘ಇತ್ಯೇಷ’ ಎಂಬುದನ್ನು ವಿಚಾರ ಪರಿಸಮಾಪ್ತಿ ಹಾಗೂ ಯಾವ ಕಾರಣಕ್ಕಾಗಿ ಸೃಷ್ಟಿ ಎಂಬ ವಿಚಾರದ ನಿರ್ದೇಶನಕ್ಕಾಗಿ ಉಪಯೋಗಿಸಲಾಗಿದೆ. ಪ್ರಕೃತಿಯಿಂದ ಮಹದಾದಿಯಾಗಿ ಸೃಷ್ಟಿಯಾಗಿದೆ.ಅಂದರೆ ಪ್ರಕೃತಿಯಿಂದ ಮಹತ್, ಮಹತ್ ಇಂದ ಅಹಂಕಾರ, ಅದರಿಂದ ತನ್ಮಾತ್ರೆಗಳು, ಏಕಾದಶ ಇಂದ್ರಿಯಗಳು ಮತ್ತು ತನ್ಮಾತ್ರೆಯಿಂದ ಪಂಚಮಹಾಭೂತಗಳು ಸೃಷ್ಟಿಯಾಗಿದೆ. ಈ ಸೃಷ್ಟಿಯು ಏತಕ್ಕಾಗಿ ಅಂದರೆ ಪ್ರತಿ ಪುರುಷನ ಮೋಕ್ಷಕ್ಕಾಗಿ, ಪ್ರತಿ ಪುರುಷನೆಂದರೆ ಯಾರು ಪ್ರಾರಬ್ಧವಶಾತ್ ದೇವ,…
ಸಾಂಖ್ಯ ಕಾರಿಕ 51-55
51. ಊಹ: ಶಬ್ದೋsಧ್ಯಯನಂ ದುಃಖ ವಿಘಾತಾನ್ ತ್ರಯ: ಸುಹೃತ್ ಪ್ರಾಪ್ತಿ: । ದಾನಂ ಚ ಸಿದ್ಧಯೋಷ್ಟೌ ಸಿದ್ಧೇ: ಪೂರ್ವಾಂಕುಶಸ್ತ್ರಿವಿಧ: ।। ಊಹ: ಎಂದರೆ ಸರ್ವದಾ ವಿಚಾರ ಮಾಡುವುದು,ತರ್ಕ ಮಾಡುತ್ತಿರುವುದು,ಪರಮಾತ್ಮನೆಂದರೆ ಯಾರು? ಸತ್ಯಯಾವುದು? ನಿಶ್ರೇಯಸ್ ಏನು ? ಯಾರು ಹೀಗೆ ವಿಚಾರ ಮಾಡುತ್ತಿರುವರೋ ಅವರಿಗೆ ಜ್ಞಾನವಾಗುವುದು. ಅಂತಹವರಿಗೆ ಪ್ರಧಾನವು ಪುರುಷನಿಂದ ಬೇರೆ, ಅಹಂ ಇತ್ಯಾದಿ ಬೇರೆ ಎಂಬ ತತ್ವವು ತಿಳಿಯುತ್ತದೆ. ಇದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಹೀಗೆ ಊಹಾಖ್ಯವೇ ಮೊದಲ ಸಿದ್ಧಿ.(ಯೋಗ ಶಾಸ್ತ್ರದಲ್ಲಿ ಇದನ್ನು ಸವಿಚಾರ ಸಿದ್ಧಿಯೆನ್ನುವರು) ಶಬ್ದ ಕೇಳಿದ…
ಸಾಂಖ್ಯ ಕಾರಿಕ 46-50
46. ಏಷ ಪ್ರತ್ಯಯ ಸರ್ಗೋ ವಿಪಾರ್ಯಯಾ ಶಕ್ತಿ-ತುಷ್ಟಿ-ಸಿದ್ಧಾಖ್ಯಾ: । ಗುಣ ವೈಷಮ್ಯವಿಮರ್ದಾತ್,ತಸ್ಯ ಚ ಭೇದಾಸ್ತು ಪಂಚಶತ್ ।। ನಿಮಿತ್ತ-ನೈಮಿತ್ತಿಕದ ೧೬ ಭೇದಗಳನ್ನು ಹೇಳಿಯಾಯಿತೋ ಅದನ್ನು ಪ್ರತ್ಯಯ ಸರ್ಗ ವೆನ್ನುತ್ತಾರೆ.ಪ್ರತ್ಯಯವೆಂದರೆ ಬುದ್ಧಿ*. ‘ಅಧ್ಯಾವಸಾಯೋ ಬುದ್ಧಿ*’ ಇತ್ಯಾದಿ ಶ್ಲೋಕದಿಂದ ಸಿದ್ಧವಾಗಿದೆ. ಈ ಪ್ರತ್ಯಯ ಸರ್ಗವು ನಾಲ್ಕು ವಿಧವಾಗಿದೆ. ೧)ವಿಪರ್ಯಯಾ ೨)ಅಶಕ್ತಿ ೩)ತುಷ್ಟಿ ೪)ಸಿದ್ಧಿ ವಿಪರ್ಯಯವೆಂದರೆ ಸಂಶಯವು ಅಥವಾ ಅಜ್ಞಾನವು.ಉದಾ :ಸ್ಥಾಣುವನ್ನು ನೋಡಿ ಇದು ಸ್ಥಾಣುವೋ ಪುರುಷನೋ ಎಂಬ ಸಂಶಯ ಉಂಟಾಗುವುದು. ವಿಪರ್ಯಯಾ. ಇದು ಸ್ಥಾಣುವೇ ಆಗಿದೆ ಅಥವಾ ಪುರುಷನೇ ಆಗಿದೆ ಎಂದು…
ಸಾಂಖ್ಯ ಕಾರಿಕ 41-45
41. ಚಿತ್ರಂ ಯಥಾಶ್ರಯಮೃತೇ ಸ್ಥಾಣವದಿಭ್ಯೋ ವಿನಾಯಥಾ ಛಾಯಾ। ತದ್ವದ್ವಿನಾ ವಿಶೇಷೈರ್ನ ತಿಷ್ಠತಿ ನಿರಾಶ್ರಯ ಲಿಂಗಮ್ ।। ಹೇಗೆ ಭಿತ್ತಿ ಅಥವಾ ಗೋಡೆಯಿಲ್ಲದೆ ಚಿತ್ರವಿರುವುದಿಲ್ಲವೋ ಮತ್ತು ಸ್ಥಾಣುವಿಲ್ಲದೆ ನೆರಳು ಇರುವುದಿಲ್ಲವೋ ಹಾಗೆ ತಣ್ಣಗಿಲ್ಲದೆ ಜಲವು, ಉಷ್ಣವಿಲ್ಲದೆ ಅಗ್ನಿಯು, ಸ್ಪರ್ಶವಿಲ್ಲದೆ ವಾಯು, ಅವಕಾಶವಿಲ್ಲದೆ ಆಕಾಶವಿರಲಾರದು. ಈ ರೀತಿಯ ನ್ಯಾಯದಿಂದ ಅವಿಷೇಶವು(ಸರ್ವ ಸಾಮಾನ್ಯ-ತನ್ಮಾತ್ರೆ) ಸೂಕ್ಷ್ಮ ಶರೀರವಿಲ್ಲದೆ ಇರುವುದಿಲ್ಲ ಹಾಗೆಯೇ ವಿಶೇಷವಾದ ಪಂಚ ಮಹಾಭೂತದ ಶರೀರಕ್ಕೂ ಆಶ್ರಯವಿರಬೇಕಾಗುತ್ತದೆ. ಆದ್ದರಿಂದ ನಿರಾಶ್ರಯ ಲಿಂಗವಿರುವುದಿಲ್ಲ. 42. ಪುರುಷಾರ್ಥ ಹೇತುಕಮಿದಂ ನಿಮಿತ್ತ ನೈಮಿತ್ತಿಕ ಪ್ರಸ೦ಗೇನ । ಪ್ರಕೃತೇರ್ವಿಭುತ್ವ…
ಸಾಂಖ್ಯ ಕಾರಿಕ 36-40
36. ಏತೆ ಪ್ರದೀಪಕಲ್ಪಾ: ಪರಸ್ಪರ ವಿಲಕ್ಷಣ ಗುಣವಿಶೇಷ: । ಕೃಸ್ತನಂ ಪುರುಷಸ್ಯಾರ್ಥ ಪ್ರಕಾಶಯ ಬುದ್ಧೌ ಪ್ರಯಚ್ಛನ್ತಿ ।। ಒಂದು ದೀಪದಲ್ಲಿ ಹೇಗೆ ಪರಸ್ಪರ ವಿರುದ್ಧ ವಿಷಯಾತ್ಮಕವಾದ ಹಣತೆ, ಎಣ್ಣೆ, ಬತ್ತಿ, ಅಗ್ನಿ ಇವು ಒಟ್ಟಾಗಿ ದೀಪವನ್ನು ಪ್ರಕಾಶಿಸುತ್ತದೆ. ಹಾಗೆಯೇ ಕರಣವೂ ಸತ್ವ,ರಜ ಮತ್ತು ತಮೋ ಗುಣಗಳು ಪರಸ್ಪರ ವಿಲಕ್ಷಣವಿದ್ದರೂ ಗುಣ ವಿಶೇಷವಾಗಿದೆ. ಅಂದರೆ ಮೂರು ಗುಣವು ಒಟ್ಟಾಗಿ ವಿಷಯವನ್ನು ಪ್ರಕಾಶಿಸುತ್ತದೆ. ಈ ಗುಣವಿಶೇಷವು ಪುರುಷನಿಗಾಗಿಯೇ. ಹೀಗೆ ಇಂದ್ರಿಯಗಳು ತಂದ ವಿಷಯವನ್ನು ಬುದ್ಧಿ ಪುರುಷನ ಭೋಗ ಮತ್ತು ಮೋಕ್ಷಕ್ಕಾಗಿ…