31. ಸ್ವಾo ಸ್ವಾo ಪ್ರತಿಪಾಧ್ಯಂತೇ ಪರಸ್ಪರಾಕೂತ ಹೇತುಕಾ: ವೃತ್ತಿಮ್ ।
ಪುರುಷಾರ್ಥ ಏವ ಹೇತುರ್ನಕೇನಚಿತ ಕಾರ್ಯತೇ ಕರಣಮ್ ।।
ಬುದ್ಧಿ, ಅಹಂಕಾರ, ಮನಸ್ಸು ಯಾವುದೇ ರೀತಿಯ ಗೊಂದಲವಿಲ್ಲದೆ, ತಮ್ಮ ತಮ್ಮ ವಿಷಯದಲ್ಲಿ ಪುರುಷನ ಅನುಭವಕ್ಕಾಗಿ ಪ್ರವೃತ್ತಿ ಹೊಂದುತ್ತದೆ. ಬುದ್ಧಿಯ ವಿಧಗಳು ಎಷ್ಟು?
32. ಕರಣಂ ತ್ರಯೋದಶವಿಧ೦ ತದಾಹರಣಧಾರಣ ಪ್ರಕಾಶಕಮ್ ।
ಕಾರ್ಯ ಚ ತಸ್ಯ ದಶಧಾಹಾರ್ಯ ಧಾರ್ಯ೦ ಪ್ರಕಾಸ್ಯಂ ಚ ।।
ಮಹದಾದಿಯಾಗಿ ಕರಣಗಳು ಹದಿಮೂರು, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಮಹತ್ , ಅಹಂಕಾರ ಮತ್ತು ತನ್ಮಾತ್ರೆ.
ಹದಿಮೂರು ಕರಣಗಳು ಏನು ಕಾರ್ಯ ಮಾಡುತ್ತವೆ ? ಕರ್ಮೇಂದ್ರಿಯಗಳು ಆಹರಣ ಮತ್ತು ಧಾರಣವನ್ನು ಮಾಡುತ್ತದೆ, ಬುದ್ಧಿಯಿಂದ್ರಿಯಗಳು ಪ್ರಕಾಶಿಸುವ ಕೆಲಸ ಮಾಡುತ್ತದೆ.
ಎಷ್ಟು ಪ್ರಕಾರವಾದ ಕಾರ್ಯವನ್ನು ಕರಣಗಳು ಮಾಡುತ್ತವೆ ? ಹತ್ತು ಪ್ರಕಾರದ ಕಾರ್ಯವನ್ನು ಮಾಡುತ್ತವೆ. ಶಬ್ದ,ಸ್ಪರ್ಶ,ರೂಪ, ರಸ, ಗಂಧವು, ವಚನ, ಆದಾನ, ವಿಹರಣ, ಉತ್ಸರ್ಗ ಮತ್ತು ಆನಂದವು ಅದರ ಕಾರ್ಯವಾಗಿದೆ. ಬುದ್ಧಿ ಇಂದ್ರಿಯ ಅದನ್ನು ಪ್ರಕಾಶಿಸುತ್ತದೆ, ಕರ್ಮೇಂದ್ರಿಯವು ಆಹರಣ ಮತ್ತು ಧಾರಣೆಯನ್ನು ಮಾಡುತ್ತದೆ.
33. ಅಂತಃ ಕರಣಂ ತ್ರಿವಿಧಂ ದಶಧಾ ಬಾಹ್ಯಾಂ ತ್ರಯಸ್ಯ ವಿಷಯಾಖ್ಯಮ್ ।
ಸಾಂಪ್ರತ ಕಾಲಂ ಬಾಹ್ಯಾಂ,ತ್ರಿಕಾಲಮಾಭ್ಯಾ೦ತರಂ ಕರಣಮ್ ।।
ಅಂತಃ ಕರಣವು ೩ ವಿಧವು, ಹತ್ತು ಪ್ರಕಾರವಾದ ಬಾಹ್ಯಕರಣವಿದೆ ೩ ಪ್ರಕಾರವಾದ ವಿಷಯವನ್ನು ಪಡೆಯುತ್ತವೆ. ವರ್ತಮಾನದ ಬಾಹ್ಯ ವಿಷಯವನ್ನು ಮಾತ್ರ ಗ್ರಹಿಸುತ್ತದೆ. ಆಭ್ಯಾ೦ತರ ಕರಣ(ಅಂತಃ ಕರಣ)ವು ಮೂರು ಕಾಲದ ವಿಷಯವನ್ನು ಗ್ರಹಿಸುತ್ತದೆ.
ಅಂತಃ ಕಾರಣವು ಪಾರಿಭಾಷಿಕ ಶಬ್ದವು.
(ವೇದಾಂತದಲ್ಲಿ ಅಂತಃ ಕರಣವನ್ನೆಂದರೇ ಮನಸ್ಸು,ಬುದ್ಧಿ, ಚಿತ್ತ ಮತ್ತು ಅಹಂಕಾರ, ಸಾಂಖ್ಯದಲ್ಲಿ ಚಿತ್ತವನ್ನು ಅಂತಃ ಕಾರಣವೆಂದು ಪರಿಗಣಿಸಲಾಗಿಲ್ಲ)
ಅಂತಃ ಕರಣವು ಬುದ್ಧಿ,ಮನಸ್ಸು ಮತ್ತು ಅಹಂಕಾರವಾಗಿ ೩ ವಿಧವಾಗಿದೆ, ೫ ಕರ್ಮೇಂದ್ರಿಯ ಮತ್ತು ೫ ಜ್ಞಾನೇಂದ್ರಿಯ ಸೇರಿಸಿ ೧೦ ಬಾಹ್ಯ ಕಾರಣವಿದೆ . ಬಾಹ್ಯಕರಣವು ಬುದ್ಧಿ,ಮನಸ್ಸು ಮತ್ತು ಅಹಂಕಾರಕ್ಕೆ ಭೋಗ್ಯ ವಿಷಯವನ್ನು ಪ್ರಾಪ್ತಿ ಮಾಡಿಸುತ್ತದೆ. ಬಾಹ್ಯಕರಣಗಳು ವರ್ತಮಾನ ವಿಷಯವನ್ನು ಮಾತ್ರ ಭೋಗ್ಯ ಮಾಡಿಸುತ್ತದೆ.
ಯೋಗಿಗಳು ಗ್ರಹಿಸುವ ಅತೀತ, ಅನಾಗತ ವಿಷಯಗಳನ್ನು ‘ಯೋಗಜ ಪ್ರತ್ಯಕ್ಷ’ ವೆನ್ನುತ್ತಾರೆ.
ಅಂತಃ ಕಾರಣವು ೩ ಕಾಲದ ವಿಷಯವನ್ನು ಗ್ರಹಿಸುತ್ತದೆ. ಬುದ್ಧಿಯು ನನಗೆ ಈಗ ಗೊತ್ತಿದೆ, ಮುಂಚೆಯು ಗೊತ್ತಿತ್ತು ಮತ್ತು ಮುಂದೆಯೂ ಗೊತ್ತಾಗುತ್ತದೆ, ಹೀಗೆ ಮೂರು ಕಾಲದೊಂದಿಗೆ ಸಂಬಂಧ ಹೊಂದುವ ಸಾಮರ್ಥ್ಯವಿದೆ.
ಹಾಗೆಯೇ ಮನಸ್ಸಿಗೆ ಸಂಕಲ್ಪ ಸಾಮರ್ಥ್ಯವು, ಅಹಂಕಾರಕ್ಕೆ ಅಭಿಮಾನ ಸಾಮರ್ಥ್ಯವು ಮೂರು ಕಾಲದೊಂದಿಗೆ ಇರುತ್ತದೆ.
ಇಂದ್ರಿಯವು ಯಾವ ಸವಿಶೇಷ ಮತ್ತು ನಿರ್ವಿಶೇಷ ವಿಷಯವನ್ನು ಗ್ರಹಿಸುತ್ತದೆ ?
34 ಬುದ್ಧೀನ್ದ್ರಿಯಾಣಿ ತೇಷಾ೦ ಪಂಚ ವಿಶೇಷಾವಿಶೇಷ ವಿಷಯಾಣಿ ।
ವಾಗ್ಭಾವತಿ ಶಬ್ದವಿಷಯಾ ಶೇಷಾಣಿ ತು ಪಂಚ-ವಿಷಯಾಣಿ ।।
ಬುದ್ಧಿ ಇಂದ್ರಿಯವು ಸವಿಶೇಷ ವಿಷಯವನ್ನು ಗ್ರಹಿಸುತ್ತದೆ. ಸವಿಶೇಷವೆಂದರೆ ರೂಪ,ರಸ,ಇತ್ಯಾದಿ ಗುಣಯುಕ್ತವೆಂದರ್ಥ ಅಥವಾ ಸುಖ,ದುಃಖ,ಮೋಹಾತ್ಮಕವಾದ ಗುಣಯುಕ್ತವೆಂದು (ಮನುಷ್ಯರಲ್ಲಿ).
ದೇವತೆಗಳಿಗೆ ಬುದ್ಧಿ ಇಂದ್ರಿಯಗಳು ನಿರ್ವಿಶೇಷ ವಿಷಯವನ್ನು ಪ್ರಕಾಶಿಸುತ್ತದೆ. ಹಾಗಾದರೆ ದೇವತಾ ಎಂದರೆ ಯಾರು? ಸಾತ್ವಿಕ ಗುಣ ಉತ್ಕೃಷ್ಟವಿರುವವರೇ ದೇವತೆ.
ಶಬ್ದವು ದೇವತೆಗಳಿಗೆ ಮತ್ತು ಮನುಷ್ಯರಿಗೆ ಸಮಾನವಾಗಿದೆ. ವಾಗ್ ಇಂದ್ರಿಯವು ತುಲ್ಯವಾಗಿದೆ.
ಪಾಣಿಯಲ್ಲಿ ಪಂಚ-ವಿಷಯವನ್ನು ಗ್ರಹಿಸಬಹುದು. ಪಾದವು ಐದು ವಿಷಯಯುಕ್ತವಾದ ಪೃಥ್ವಿಯೊಂದಿಗೆ ಕೂಡ ಸಂಬಂಧ ಹೊಂದುತ್ತದೆ. ಹಾಗೆಯೇ ಉತ್ಸರ್ಗವು ಕೂಡ ಪಂಚಕೃತವೇ ಆಗಿದೆ. ಉಪಸ್ಥ ಇಂದ್ರಿಯವು ಕೂಡ ಪಂಚ ಲಕ್ಷಣವಾಗಿದೆ.
35. ಸಾಂತಕರಣಾ ಬುದ್ಧಿ: ಸರ್ವಂ ವಿಷಯಮವಗಾಹತೆ ಯಸ್ಮಾತ್।
ತಸ್ಮಾತ್ ತ್ರಿವಿಧಂ ಕರಣಂ ದ್ವಾರಿ ದ್ವಾರಾಣಿ ಶೇಷಾಣಿ ।।
ಬುದ್ಧಿ,ಅಹಂಕಾರ ಮನಸ್ಸು ಸಹಿತವಾದ ಅಂತಃಕರಣವು ೩ ಕಾಲದಲ್ಲೂ ವಿಷಯವನ್ನು ಗ್ರಹಿಸುತ್ತದೆ.(ಅತೀತ, ಅನಾಗತ, ವರ್ತಮಾನ) ಮತ್ತು ಎಲ್ಲಾ ವಿಷಯವನ್ನು ಗ್ರಹಿಸುತ್ತದೆ. ಆದ್ದರಿಂದ ಅದನ್ನು ‘ದ್ವಾರಿ’ ಎನ್ನುತ್ತಾರೆ. ಉಳಿದ ಕರಣಗಳನ್ನು ‘ದ್ವಾರ’ ಎನ್ನುತ್ತಾರೆ.