ತಸ್ಮಾದ್ ಅಪಿ ಷೋಡಶಕಾತ್ಪಂಚಭ್ಯ: ಪಂಚ ಭೂತಾನಿ ।।
ಪ್ರಕೃತಿ ಎಂದರೆ ಪ್ರಧಾನ,ಅವ್ಯಕ್ತ,ಬಹುದಾತ್ಮಕವು,ಬ್ರಹ್ಮವು ಮತ್ತು ಮಾಯಾ.
ಅಲಿಂಗವಾದ ಪ್ರಕೃತಿಯಿಂದ ಮಹತ್ ಉತ್ಪತ್ತಿಯಾಗುತ್ತದೆ.
ಮಹತ್ ಪರ್ಯಾಯ ಪದಗಳೆಂದರೆ ಬುದ್ಧಿ, ಆಸುರಿ, ಮತಿ:, ಖ್ಯಾತಿ, ಜ್ಞಾನಂ, ಪ್ರಜ್ಞಾನಂ. ಯಿ
ಮಹತ್ ಯಿಂದ ಅಹಂಕಾರ ಹುಟ್ಟುತ್ತದೆ.ಅಹಂಕಾರದ ಪರ್ಯಾಯ ಶಬ್ದಗಳು ಭೂತಾದಿ(ಭೂತಗಳ ಆದಿ), ವೈಕೃತ, ತೈಜಸ, ಅಭಿಮಾನ.
ಅಹಂಕಾರದಿಂದ ೧೬ ಗುಣಗಳು ಉತ್ಪತ್ತಿಯಾಗುತ್ತದೆ. ಅವುಗಳೆಂದರೆ ಪಂಚತನ್ಮಾತ್ರೆಗಳು, ಏಕಾದಶ ಇಂದ್ರಿಯಗಳು(೫ ಕರ್ಮೇಂದ್ರಿಯ(ವಾಕ್,ಪಾಣಿ,ಪಾದ,ಪಾಯು ಮತ್ತು ಉಪಸ್ಥ) ೫ ಜ್ಞಾನೇಂದ್ರಿಯಗಳು(ಶೋತ್ರಂ,ತ್ವಕ್,ಜಿಹ್ವಾ,ಘ್ರಾಣ, ಚಕ್ಷು) ಮತ್ತು ಮನಸ್ಸು ಉಭಯಾತ್ಮಕವು). ಇದರಿಂದ ಪಂಚ ಭೂತಗಳು ಉತ್ಪತ್ತಿಯಾಗುತ್ತದೆ. ಶಬ್ದ ತನ್ಮಾತ್ರೆಯಿಂದ ಆಕಾಶವು, ಸ್ಪರ್ಶ ತನ್ಮಾತ್ರೆಯಿಂದ ವಾಯು, ರೂಪ ತನ್ಮಾತ್ರೆಯಿಂದ ತೇಜ,ರಸ ತನ್ಮಾತ್ರೆಯಿಂದ ಜಲ ಮತ್ತು ಗಂಧ ತನ್ಮಾತ್ರೆಯಿಂದ ಪೃಥ್ವಿ ಉತ್ಪತ್ತಿಯಾಗುತ್ತದೆ.
ಪುರುಷ, ಪ್ರಕೃತಿ/ಪ್ರಧಾನ, ಮಹತ್, ಅಹಂಕಾರ, ೧೬ ಗುಣಗಳು, ೫ ಭೂತಗಳು ಇವೇ ಸಾಂಖ್ಯದರ್ಶನದ ೨೫ ತತ್ವಗಳು. ಇವುಗಳ ಜ್ಞಾನದಿಂದ ಮೋಕ್ಷ ಪ್ರಾಪ್ತಿಯಾಗುವುದು. ಹಾಗಾದರೆ ಮಹತ್ ಎಂದರೇನು?
ಅದರ ಲಕ್ಷಣಗಳೇನು
23. ಅಧ್ಯಾವಸಾಯೋ ಬುದ್ಧಿರ್ಧರ್ಮೋ ಜ್ಞಾನಂ ವಿರಾಗ ಐಶ್ವರ್ಯಮ್ ।
ಸಾತ್ವಿಕಮ್ ಏತದ್ ರೂಪಂ ತಾಮಸಮ್ ಅಸ್ಮಾದ್ ವಿಪರ್ಯಯಸ್ಥಮ್ ।।
ಅಧ್ಯಾವಸಾಯವೇ ಬುದ್ಧಿಯ ಲಕ್ಷಣವು ಅಂದರೆ ನಿಶ್ಚಯಾತ್ಮಕ ಬುದ್ಧಿ ಎಂದರ್ಥ. ಉದಾ: ಬೀಜದಲ್ಲಿ ದೊಡ್ಡ ಮರವನ್ನು ನೋಡುವ ಶಕ್ತಿ. ಇದು ಮಡಿಕೆ, ಇದು ಮನೆ ಎಂದೆಲ್ಲ ವಿಚಾರಾತ್ಮಕವಾಗಿ ನಿಶ್ಚಯಿಸುವುದಕ್ಕೆ ಅಧ್ಯವಸಾಯ ಎಂದು ಹೆಸರು.
ಸಾತ್ವಿಕ ಮತ್ತು ತಾಮಸ ರೂಪಭೇದದಿಂದ ಬುದ್ಧಿಯು 8 ಅಂಗ ಯುಕ್ತವಾಗಿದೆ.ಸಾತ್ವಿಕ ಬುದ್ಧಿಯ ರೂಪಗಳು ಧರ್ಮ, ಜ್ಞಾನ, ವೈರಾಗ್ಯ ಮತ್ತು ಐಶ್ವರ್ಯ.
ಧರ್ಮ: ದಯಾ, ದಾನ, ಯಮ ಮತ್ತು ನಿಯಮ ಧರ್ಮದ ಲಕ್ಷಣಗಳು.ಪಾತಂಜಲಿ ಸೂತ್ರದಲ್ಲಿ ಹೇಳಿರುವ ಯಮ ನಿಯಮಗಳ ಸೂತ್ರಗಳನ್ನು ಇಲ್ಲಿ ಅಂಗೀಕರಿಸುತ್ತೇವೆ.
ಯಮ: ಅಹಿಂಸಾ, ಸತ್ಯ, ಅಸ್ಧೇಯ, ಬ್ರಹ್ಮಚರ್ಯ, ಅಪರಿಗ್ರಹ ಇದು ಯಮ.
ನಿಯಮ: ಶೌಚ(ಶಾರೀರ ಮತ್ತು ಮಾನಸಿಕ), ಸಂತೋಷ, ತಪಸ್ಸು, ಸ್ವಾಧ್ಯಾಯವು, ಈಶ್ವರ ಪ್ರಣಿಧಾನಿ ಇವು ನಿಯಮವು.
ಜ್ಞಾನ: ಪ್ರಕಾಶ,ಅವಗಮ,ಭಾನಂ ಇವು ಜ್ಞಾನದ ಪರ್ಯಾಯ ಶಬ್ದಗಳು. ಜ್ಞಾನವು ಎರಡು ಪ್ರಕಾರವಾಗಿದೆ.ಬಹಿರ್ಜ್ಞಾನ, ಆಭ್ಯಂತರ ಜ್ಞಾನ. ವೇದವೇ ಬಹಿರ್ಜ್ಞಾನವಾಗಿದೆ. ವೇದದ ಷಡಂಗಗಳು,ಶಿಕ್ಷಾ, ಕಲ್ಪ,ವ್ಯಾಕರಣ,ನಿರುಕ್ತ,ಛಂದ, ಜೋತಿಷ ಬಹಿರ್ಜ್ಞಾನವಾಗಿದೆ. ಪುರಾಣಗಳು ನ್ಯಾಯ,ಮೀಮಾಂಸ ಮತ್ತು ಧರ್ಮಶಾಸ್ತ್ರ ಇವುಗಳನ್ನು ಕೂಡ ಬಹಿರ್ಜ್ಞಾನ ಎನ್ನುತ್ತಾರೆ.
ಪ್ರಕೃತಿ ಪುರುಷರ ಜ್ಞಾನವು ಆಭ್ಯಂತರ ಜ್ಞಾನವಾಗಿದೆ.ಪ್ರಕೃತಿಯು ಸತ್ವ,ರಜಸ್ ಮತ್ತು ತಮೋಗುಣಗಳ ಸಾಮ್ಯಾವಸ್ಥೆಯಾಗಿದೆ.
ಸಿದ್ಧ,ನಿರ್ಗುಣ ಮತ್ತು ವ್ಯಾಪಿಗೆ ಪುರುಷ ಎನ್ನುತ್ತಾರೆ. ಬಾಹ್ಯಾಜ್ಞಾನದಿಂದ ಲೌಕಿಕ ಪ್ರವೃತ್ತಿಯಾಗುತ್ತದೆ. ಆಭ್ಯಂತರ ಜ್ಞಾನದಿಂದ ಮೋಕ್ಷ ದೊರಕುತ್ತದೆ.
ವೈರಾಗ್ಯವು ಎರಡು ವಿಧ ೧)ಬಾಹ್ಯ ೨)ಆಭ್ಯಂತರ ಅಥವಾ ಬಹಿರ್ಮುಖ ವೈರಾಗ್ಯ ಮತ್ತು ಅಂತರ್ಮುಖ ವೈರಾಗ್ಯ. ದ್ರಷ್ಟ ವಿಷಯದಲ್ಲಿ ಉಂಟಾಗುವ ವೈತೃಷ್ಣವೆೇ ಬಾಹ್ಯ ವೈರಾಗ್ಯ ಎಂದರೆ ಆರ್ಜನ,ರಕ್ಷಣೆ, ಕ್ಷಯಾ, ಸಂಘ ಇವುಗಳಲ್ಲಿ ದುಃಖವು ಕಾಣುವುದೇ ಆಗಿದೆ.
ಪ್ರಧಾನವು ಸ್ವಪ್ನ ಅಥವಾ ಇಂದ್ರ ಜಾಲದಂತಿರುವ ಸೃಷ್ಟಿಯಾಗಿದೆ .ಇದು ಬಂಧನ ಕಾರಣವಲ್ಲ ಎಂಬುದು ಮೋಕ್ಷಾರ್ಥಿಗೆ ಉಂಟಾಗುವ ವೈರಾಗ್ಯವು ಆಭ್ಯಂತರ ವೈರಾಗ್ಯವು.
ಐಶ್ವರ್ಯವು ಈಶ್ವರ ಭಾವವು, ಅಷ್ಟ ಸಿದ್ಧಿಗಳಾದ ಅಣಿಮಾ,ಮಹಿಮಾ,ಲಘಿಮಾ,ಪ್ರಾಪ್ತಿ,ಪ್ರಾಕಾಮ್ಯ, ಈಶಿತ್ವ ,ವಶಿತ್ವಮ್,ಯತ್ರಾಕಾಮ್ಯ ಅವಸಾಯಿತ್ವಮ್ ಇವು ಐಶ್ವರ್ಯವು.
ಧರ್ಮ,ಜ್ಞಾನ,ವೈರಾಗ್ಯ ಮತ್ತು ಐಶ್ವರ್ಯ ಇವು ಸಾತ್ವಿಕ ಬುದ್ಧಿಯ ರೂಪಗಳು.
ಸಾತ್ವಿಕ ಗುಣವು ಉತ್ಕೃಷ್ಟವಾಗಿದ್ದು,ರಜೋ ಮತ್ತು ತಮೋ ಗುಣಗಳು ಅಭಿಭಾವವಾದಾಗ ಸಾತ್ವಿಕ ಬುದ್ಧಿ ಉಂಟಾಗುತ್ತದೆ.
ತಾಮಸ ಬುದ್ಧಿಯು ಸಾತ್ವಿಕ ಬುದ್ಧಿಯ ವಿಪರೀತವಾಗಿರುತ್ತದೆ. ಅಧರ್ಮ,ಅಜ್ಞಾನಂ,ಅವೈರಾಗ್ಯ ಮತ್ತು ಅನೈಶ್ವರ್ಯ ಇವು ತಾಮಸ ಬುದ್ಧಿ ರೂಪಗಳು.
ಹಾಗಾದರೆ ಅಹಂಕಾರದ ಲಕ್ಷಣವೇನು ?
24. ಅಭಿಮಾನೋಹಂಕಾರಃ ತಸ್ಮಾದ್ ದ್ವಿವಿಧ: ಪ್ರವರ್ತತೇ ಸರ್ಗ: ।
ಏಕಾದಶಕಾಶ್ಚ ಗಣ: ತನ್ಮಾತ್ರ: ಪಂಚಕಶ್ಚೈವ ।।
ಅಭಿಮಾನವೇ ಅಹಂಕಾರವು. ಈ ಅಹಂಕಾರದಿಂದ ಎರಡು ತರಹದ ಸರ್ಗ ಸೃಷ್ಟಿಯಾಗುತ್ತದೆ.
ಏಕಾದಶ ಇಂದ್ರಿಯ ಮತ್ತು ಪಂಚ ತನ್ಮಾತ್ರೆ ಸೃಷ್ಟಿಯಾಗುತ್ತದೆ.
ಹಾಗಾದರೆ ಸೃಷ್ಟಿ ಹೇಗಾಗುತ್ತದೆ ?
25. ಸಾತ್ವಿಕ ಏಕಾದಶಕ: ಪ್ರವರ್ತತೇ ವೈಕೃತಾದ್ ಅಹಂಕಾರಾತ್ ।
ಭೂತದೇಸ್ತನ್ಮಾತ್ರ: ಸ ತಾಮಸ: ತೈಜಸಾದುಭಯಮ್ ।।
ಸತ್ವವು ಅಧಿಕವಾಗಿದ್ದು,ರಜೋ ಮತ್ತು ತಮೋ ಗುಣವು ಅಭಿಭವವಾಗಿದ್ದರೆ ಅದನ್ನು ಸಾತ್ವಿಕ ಅಹಂಕಾರ ಎನ್ನುತ್ತಾರೆ. ಪೂರ್ವಾಚ್ಯರರು ಅದನ್ನು ವೈಕೃತ ಎಂದು ಕರೆದಿರುತ್ತಾರೆ. ಈ ವೈಕೃತ ಅಹಂಕಾರದಿಂದ ಏಕಾದಶ ಇಂದ್ರಿಯ ಗಣವು ಸೃಷ್ಟಿಯಾಗುತ್ತದೆ. ಇದ್ದರಿಂದ ಸಾತ್ವಿಕ ವಿಷಯದಲ್ಲಿ ಪ್ರವೃತ್ತಿಯಾಗುವುದಕ್ಕೆ ಇಂದ್ರಿಯಗಳಿಗೆ ಸಾಮಾರ್ಥ್ಯ ದೊರೆಯುತ್ತದೆ. ಆದ್ದರಿಂದ ಅದನ್ನು ‘ಸಾತ್ವಿಕ ಏಕಾದಶಕ:’ ಎಂದು ಹೇಳಲಾಗಿದೆ.
ಅಷ್ಟೇ ಅಲ್ಲ ಭೂತಾದೆಯಿಂದ ತಾನ್ಮಾತ್ರೆ ಏನು ಸೃಷ್ಟಿಯಾಗಿದೆ ಅದು ತಾಮಸ ಅಹಂಕಾರದಿಂದ ಸೃಷ್ಟಿಯಾಗಿದೆ. ಯಾವಾಗ ತಾಮಸವು ಅಧಿಕವಾಗಿದ್ದು ಸತ್ವ ಮತ್ತು ರಜೋಗುಣಗಳು ಅಭಿಭವವಾಗಿದ್ದರೆ ಅದನ್ನು ‘ತಾಮಸ ಅಹಂಕಾರ’ವೆನ್ನುತ್ತಾರೆ. ಅದನ್ನು ‘ಭೂತಾದಿ’ ಎಂದು ಕರೆಯಲಾಯಾಗಿದೆ. ಇದನ್ನು ತಾಮಸವೆಂದು ಏಕೆ ಕರೆಯಲಾಗಿದೆ ಎಂದರೆ ಆದಿ ಭೂತವಾದ ಆಕಾಶವು ತಾಮಸವಾಗಿದ್ದರಿಂದ. ಅದರಿಂದ ಭೂತಾದಿಯಿಂದ ಪಂಚತನ್ಮಾತ್ರೆಯ ಸೃಷ್ಟಿಯಾಗಿದೆ.
ಯಾವಾಗ ರಜೋಗುಣವು ಅಧಿಕವಾಗಿದ್ದು.ಸತ್ವ ಮತ್ತು ತಮೋಗುಣವು ಅಭಿಭವವಾಗಿದ್ದರೆ ಅದನ್ನು ‘ರಾಜಸ ಅಹಂಕಾರ’ ಅಥವಾ ‘ತೈಜಸ’ವೆನ್ನುತ್ತಾರೆ. ಇದರಿಂದ ಉಭಯವು ಉತ್ಪತ್ತಿಯಾಗುತ್ತದೆ. ಉಭಯವೇನೆಂದರೆ ಏಕಾದಶ ಗಣವು ಮತ್ತು ಪಂಚತನ್ಮಾತ್ರೆ ಎಂದರ್ಥ.
ಸಾತ್ವಿಕವು ಮತ್ತು ತಾಮಸವು ನಿಷ್ಕ್ರಿಯವಾದರಿಂದ ವೈಕೃತವಾಗಲಿ, ಭೂತಾದಿಯಾಗಲಿ ತೈಜಸದೊಂದಿಗಿನ ಸಂಬಂಧದಿಂದಲೆ ಏಕಾದಶ ಇಂದ್ರಿಯ ಮತ್ತು ಪಂಚತನ್ಮಾತ್ರೆಯನ್ನು ಉತ್ಪತ್ತಿಸುತ್ತಿದೆ. ಆದ್ದರಿಂದ ತೈಜಸವನ್ನು ಉಭಯಮ್ ಎಂದು ಹೇಳಿದ್ದಾರೆ.
ಸಾತ್ವಿಕ ಅಹಂಕಾರದಿಂದ ಏನು ಉತ್ಪತ್ತಿಯಾಗುತ್ತದೆ ಇದರ ಸಂಜ್ಞೆ/ಹೆಸರು ಏನು ?