ಗುರು ವರಣಕಮೇವ ತಮಃ , ಪ್ರದೀಪವಚ್ವಾರ್ಥತೋವೃತ್ತಿ: ।।
ಯಾವಾಗ ಸತ್ವವು ಉತ್ಕಟವಾಗುವುದೋ ಆವಾಗ ಶರೀರವು ಲಘುವಾಗಿ(ಹಗುರವಾಗಿ) ಭಾಸವಾಗುವುದು. ಬುದ್ಧಿಯು ಪ್ರಕಾಶಗೊಳ್ಳುವುದು,ಎಲ್ಲ ಇಂದ್ರಿಯಗಳು ತೃಪ್ತವಾಗಿರುತ್ತದೆ.
ಉಪಷ್ಟ೦ಭಕಂ ಎಂದರೆ ಉದ್ಯೋತಕರಂ ಎಂದರ್ಥ.
ಉದಾ:ಮಳೆ ಸುರಿದಾಗ ರೈತನ ಕೆಲಸವನ್ನು ಶುರುಮಾಡುತ್ತಾನೆ.ಇದು ರಜೋ ಗುಣವು . ಹೀಗೆ ರಜೋಗುಣವು ಹೊರಗೆ ಉದ್ಯೋತಕರವಾಗಿರುತ್ತದೆ.ಒಳಗೆ ಎಂದರೆ ಅಂತ:ಕರಣದಲ್ಲಿ ಚಂಚಲವಾಗಿರುತ್ತದೆ.
ಯಾವಾಗ ತಮೋಗುಣವು ಉತ್ಕಟವಾಗುವುದೋ ಆಗ ಶರೀರವು ಗುರು(ಭಾರ)ವಾಗಿ ಭಾಸವಾಗುವುದು.ಇಂದ್ರಿಯಗಳು ವಿಷಯಗ್ರಹಣ ಸಾಮಾರ್ಥ್ಯವನ್ನು ಕಳೆದುಕೊಳ್ಳುತ್ತವೆ.
ಗುಣಗಳು ಹೀಗೆ ಪರಸ್ಪರ ವಿರುದ್ಧವಾಗಿದ್ದರೂ ಅವುಗಳು ಅನ್ಯೋನ್ಯವಾಗಿ ಹೇಗೆ ಕೆಲಸ ಮಾಡುತ್ತವೆ ? ಎಂದರೆ
ದೀಪದಂತೆ ವೃತ್ತಿಯಿರುತ್ತದೆ ಹೀಗೆಂದರೆ ದೀಪವು ಪರಸ್ಪರ ವಿರುದ್ಧವಾದ ಎಣ್ಣೆ,ಬತ್ತಿ. ಹಣತೆಯು ಒಟ್ಟಾಗಿ ಕೆಲಸ ಮಾಡುತ್ತವೆ.
ಪ್ರಧಾನವು ಅಕಾರಣವು ಎಂದರೆ ತ್ರಿಗುಣವು . ಹಾಗಾದರೆ ವ್ಯಕ್ತವಾದ ಮಹಾದಾದಿಗಳು ತ್ರಿಗುಣಯುಕ್ತವೆಂದು ಹೇಗೆ ಹೇಳುತ್ತೀರಿ ?
14. ಅವಿವೇಕ್ಯಾದಿ: ಸಿದ್ಧ: ತ್ರೈಗುಣ್ಯಯಾತ್ ತದ್ವಿಪರ್ಯಾಯಾ ಭಾವಾತ್ ।
ಕಾರಣ-ಗುಣಾತ್ಮಕವತ್ ಕಾರ್ಯಸ್ಯ ಅವ್ಯಕ್ತಮ್ ಅತಿ ಸಿದ್ಧಮ್ ।।
ಅವಿವೇಕಿ ಇತ್ಯಾದಿ ತ್ರಿಗುಣಗಳು ಮಹದಾದಿಯಾದ ವ್ಯಕ್ತರೂಪದಲ್ಲಿರುತ್ತದೆ.ಆದರೆ ಅವ್ಯಕ್ತದಲ್ಲಿ ಇದು ಸಿದ್ಧವಾಗುವುದಿಲ್ಲವೆಂದರೆ ? ಕಾರ್ಯವು ಅವಿವೇಕ್ಯಾದಿ ರೂಪದಲ್ಲಿದ್ದರೆ ಅದರ ಕಾರಣ ವಿಪರೀತವಾಗಿರುವುದಕ್ಕೆ ಸಾಧ್ಯವೇಯಿಲ್ಲ.
ಕಾರ್ಯವು ಕಾರಣದ ವಿಪರೀತವಾಗಿರುವುದಕ್ಕೆ ಸಾಧ್ಯವೇ ಇಲ್ಲವಾದರಿಂದ,ಕಾರಣವು ಕಾರ್ಯದಂತೆ ಅವಿವೇಕಿಯಾಗಿರುತ್ತದೆ.
ಉದಾ:ನೂಲಿನಿಂದ ಬಟ್ಟೆಯಾಗಿರುವಾಗ,ನೂಲು ಒಂದು ಕಡೆ,ಬಟ್ಟೆ ಒಂದು ಕಡೆ ಇರಲು ಸಾಧ್ಯವಿಲ್ಲ.ಹಾಗು ನೂಲು ಹೇಗಿರುತ್ತದೆಯೋ ಬಟ್ಟೆಯು ಹಾಗೆ ಇರುತ್ತದೆ.
ಹೀಗಾಗಿ ಅವ್ಯಕ್ತವಾದುದನ್ನು ವ್ಯಕ್ತದ ಮೂಲಕ ನೋಡಬೇಕು.ಯಾರು ವ್ಯಕ್ತವನ್ನು ನೋಡುತ್ತಾರೋ ಅವರು ಅವ್ಯಕ್ತವನ್ನೇ ನೋಡುತ್ತಿರುತ್ತಾರೆ.
(ಕಾರ್ಯ ಕಾರಣ ಅನನ್ಯತ್ವ) { ಈ ವಿಷಯವನ್ನು ವೇದಾಂತದಲ್ಲಿ ತರಕೂಡದು,ಏಕೆಂದರೆ ವೇದಾಂತದಲ್ಲಿ ಸೃಷ್ಟಿಯು ಅಧ್ಯಾಸಯುಕ್ತವಾಗಿರುತ್ತದೆ}
ಈ ಕಾರಣದಿಂದ ಅವ್ಯಕ್ತವು ಸಿದ್ಧವಾಗುತ್ತದೆ.
ಪೂರ್ವಪಕ್ಷಿಯು ಅವ್ಯಕ್ತವು ಉಪಲಬ್ಧಿಯಾಗಿರುವುದಿಲ್ಲವಾದ್ದರಿಂದ ಅದಕ್ಕೆ ಅಸ್ತಿತ್ವವಿಲ್ಲವೆಂದರೆ ?
15. ಭೇದಾನಾ೦ ಪರಿಮಾಣಾತ್,ಸಮನ್ವಯಾತ್ ಶಕ್ತಿತಃ ಪ್ರವೃತೇಶ್ಚ ।
ಕಾರಣಕಾರ್ಯ ವಿಭಾಗಾತ್-ಅವಿಭಾಗಾತ್ ವೈಶ್ವರೂಪಸ್ಯ ।।
ಅವ್ಯಕ್ತಕ್ಕೂ ವ್ಯಕ್ತಕ್ಕೂ ಕ್ರಿಯಾ-ಕಾರಕ ಸಂಬಂಧವಿದೆ.ಲೋಕದಲ್ಲಿ ಕಾರ್ಯದ ಎಲ್ಲೆಡೆ ಪರಿಮಾಣವನ್ನು ನೋಡಬಹುದು.
ಉದಾ:ಮಡಿಕೆಯ ಗಾತ್ರವು ತೆಗೆದು ಕೊ೦ಡಂತಹ ಮಣ್ಣಿನ ಗಾತ್ರದ ಮೇಲೆ ನಿರ್ಧರಿಸುತ್ತದೆ. ಮಹದಾದಿ ಲಿಂಗವು ಪರಿಣಿತವು (limited ) , ಪರಿಚ್ಪಿನ್ನವು (ಏಕೆಂದರೆ ಭೇದವಿರುವುದರಿಂದ) ,ಬುದ್ಧಿಯು , ಅಹಂಕಾರವು,ಪಂಚತನ್ಮಾತ್ರೆ ,ಪಂಚ ಭೂತಗಳು ಎಂದೆಲ್ಲ ಭೇದವನ್ನು ಮಾಡಬಹುದು ,ಆದ್ದರಿಂದ ಇವು ಪ್ರಧಾನದ ಕಾರ್ಯವು ಎನ್ನಬೇಕಾಗುತ್ತದೆ.
ಏಕೆಂದರೆ ಕಾರಣವೇ ಇಲ್ಲದಿದ್ದರೆ ಕಾರ್ಯ ಹೇಗೆ ಉತ್ಪತ್ತಿಯಾಗುತ್ತದೆ ? ಸೃಷ್ಟಿಯಲ್ಲಿ ಕಾರ್ಯವು ಕಾಣುವುದರಿಂದ : ಹಾಗು ಅದು ಪರಿಮಿತವು ಆದ್ದರಿಂದ ಇದಕ್ಕೆ ಕಾರಣವುಯಿರಲೇಬೇಕೆಂದು ಅನುಮಾನದ ಮೂಲಕ ಕಾರಣವು ಸಿದ್ಧವಾಗುತ್ತದೆ.
ಹಾಗು ಸಮನ್ವಯವನ್ನು ನೋಡಬಹುದು.
ಉದಾ:ವಟುವನ್ನು ನೋಡಿ,ಇವನ ತಂದೆ ತಾಯಿಗಳು ಬ್ರಾಹ್ಮಣರು ಎಂದು ನಿರ್ಧರಿಸಬಹುದು.ಅಥವಾ ಸಮನ್ವಯ ಮಾಡಬಹುದು ಅದೇರೀತಿ ಮಹದಾದಿ ಕಾರ್ಯವನ್ನು ನೋಡಿ ಕಾರಣವಾದ ಪ್ರಧಾನವನ್ನು ಸಮನ್ವಯ ಮಾಡಬಹುದು.
ಕುಂಬಾರನಿಂದ ಮಡಿಕೆ ಮಾಡಲಾಗುವುದೇ ಹೊರತು ಬಟ್ಟೆಯನ್ನೆಲ್ಲ.ಅದೇ ರೀತಿ ಅಹಂಕಾರದಲ್ಲಿ ಪ್ರಪಂಚದ ಎಲ್ಲಾ ಕಾರ್ಯವು ಅಡಕವಾಗಿರುತ್ತದೆ.
ಕಾರಣ-ಕಾರ್ಯ ವಿಭಾಗಾತ್
ಮಾಡುವುದು ಕಾರಣ,ಫಲವು ಕಾರ್ಯ.
ಮಡಿಕೆಯಲ್ಲಿ ಹಾಲು,ಮೊಸರು,ನೀರನ್ನು ತುಂಬಬಹುದು ಆದರೆ ಮಣ್ಣಿನಲ್ಲಿ ತುಂಬಲು ಸಾಧ್ಯವಿಲ್ಲ.
ಹಾಗೆಯೇ ಕಾರಣ-ಕಾರ್ಯವು ಅದಲುಬದಲು ಆಗುವುದಕ್ಕೆ ಸಾಧ್ಯವಿಲ್ಲ.
ಅದೇ ರೀತಿ ಲೋಕದಲ್ಲಿ ಸಾಮಾನ್ಯವಾಗಿ ಕಾಣುವ ಕಾರ್ಯವನ್ನು ನೋಡಿ ಇದಕ್ಕೆ ಕಾರಣವಿರಬೇಕೆಂದು ಅನುಮಾನಿಸಬಹುದು.ಕಾರಣವೇ ಪ್ರಧಾನ.
ಅವಿಭಾಗಾತ್-ವೈಶ್ವರೂಪಸ್ಯ
ವಿಶ್ವರೂಪದ ಭಾವವೇ ವೈಶ್ವರೂಪ.ಪ್ರಧಾನದಲ್ಲಿ ವಿಭಾಗವಿಲ್ಲದಿರುವುದರಿಂದ ಅದು ಕಾರಣವು.
ಹಾಗು ಪ್ರಳಯದಲ್ಲಿ ಕಾರ್ಯ ಕಾರಣದಲ್ಲಿ ಸೃಷ್ಟಿಕ್ರಮದ ವಿಪರೀತಿವಾಗಿ ಲಯವಾಗುತ್ತದೆ.
ಅವಿಭಾಗಾತ್-ಲಯಪ್ರಾಪ್ತಿಯೆಂಬ ಅರ್ಥದಲ್ಲಿ ತೆಗೆದುಕೊಳ್ಳಬೇಕು.