21. ಪುರುಷಸ್ಯ ದರ್ಶನಾರ್ಥ ಕೈವಲ್ಯಾರ್ಥ ತಥಾ ಪ್ರಧಾನಸ್ಯ । ಪಂಗ್ವ-ಅಂಧವದ್ ಉಭಯೋರಪಿ ಸಂಯೋಗತ್ಸತ್-ಕೃತ: ಸರ್ಗ: ।। ಪುರುಷನು ತನ್ನ ಕರ್ಮವನ್ನು ಅನುಭವಿಸಲು ಪ್ರಧಾನದೊಂದಿಗೆ ಸಂಯೋಗವಾಗುವನು. ಪುರುಷನು ಮಹತ್ ನಿಂದ ಭೂತದವರೆಗೂ ಎಲ್ಲವನ್ನು ನೋಡುತ್ತಾನೆ ಆದರೆ ಪ್ರಕೃತಿಯನ್ನು ನೋಡಲಾಗುವುದಿಲ್ಲ.ಕಾರ್ಯಲಿಂಗಕ ಅನುಮಾನದಿಂದ ನೋಡಿದರೆ ಪ್ರಕೃತಿಯು ಅನುಮೇಯವಾಗುತ್ತದೆ . ಇದರಿಂದ ಪ್ರಕೃತಿಯುಪುರುಷನೊಂದಿಗೆ ಕೈವಲ್ಯಾರ್ಥವಾಗಿ(ಮೋಕ್ಷ ಪ್ರಾಪ್ತಿ ಮಾಡಿಸಲು) ಸಂಯೋಗ ಹೊಂದುತ್ತದೆ. ಈ ಸಂಯೋಗವು ಕುಂಟ-ಕುರುಡರ ಸಂಯೋಗದಂತೆ. ಒಬ್ಬ ಕುರುಡನು,ಒಬ್ಬ ಕುಂಟನು ಇದ್ದನು. ಇವರುಗಳು ಬಂಧುವರ್ಗದಿಂದ ಬೇರ್ಪಟ್ಟಿದ್ದರು. ಇವರಿಬ್ಬರು ಒಂದೇ ಸ್ಥಳಕ್ಕೆ ಹೋಗಬೇಕಾಗಿತ್ತು. ಕುಂಟನು ಕುರುಡನ ಹೆಗಲಮೇಲೆ…
Category: Sankhya
ಸಾಂಖ್ಯ ಕಾರಿಕ 16-20
16. ಕಾರಣಮಸ್ತ್ಯವ್ಯಕ್ತಂ ಪ್ರವರ್ತತೇ ತ್ರಿಗುಣತ: ಸಮುದಾಯಾಶ್ಚ । ಪರಿಣಾಮತಃ ಸಲಿಲವತ್ ಪ್ರತಿ ಪ್ರತಿ ಗುಣಾಶ್ರಯ ವಿಶೇಷಾತ್ ।। ಅವ್ಯಕ್ತವು ಕಾರಣವು ಹೇಗೆಂದರೆ ಮಹದಾದಿಗಳು ಅದರಲ್ಲಿ ಲಯ ಹೊಂದುವುದರಿಂದ ಅವ್ಯಕ್ತವು ಕಾರಣವು. ಅದು ಏಕೆಂದರೆ ? ಪ್ರಧಾನದಿಂದ ಸೃಷ್ಟಿಯಾದ ವ್ಯಕ್ತವು ಕೂಡ ತ್ರಿಗುಣಯುಕ್ತವಾದರಿಂದ. ತ್ರಿಗುಣಯುಕ್ತವಾದರಿಂದ ಏನು ಸಿದ್ಧವಾಗುತ್ತದೆ ? ಸತ್ವ ರಜ ತಮೋಗುಣಗಳು ಸಾಮ್ಯಾವಸ್ಥೆಯಲ್ಲಿದರೆ ಅದು ಪ್ರಧಾನವಾಗುವುದು. ಆ ಸಾಮ್ಯಾತೆ ನಷ್ಟವಾದರೆ ಅದು ಸೃಷ್ಟಿಯಾಗುತ್ತದೆ. ಗಂಗೆಯು ಶಿವನ ಶಿರದಿಂದ ಬೀಳುವಾಗ ಮೂರು ಧಾರೆಯಾಗಿದ್ದರು ಭೂಮಿಗೆ ಬರುವಾಗ ಮೂರು ಧಾರೆಯು ಒಂದಾಗಿ…
ಸಾಂಖ್ಯ ಕಾರಿಕ 11-15
11. ತ್ರಿಗುಣಂ ಅವಿವೇಕಿ ವಿಷಯ: ಸಾಮಾನ್ಯಮಚೇತನಂ ಪ್ರಸವಧರ್ಮಿ । ವ್ಯಕ್ತಂ ತಥಾ ಪ್ರಧಾನಂ ತದ್ವಿಪರೀತತ್ಸಥಾ ಚ ಪುಮಾನ್ ।। ವ್ಯಕ್ತವು ಪ್ರಧಾನದಂತೆ ತ್ರಿಗುಣಯುಕ್ತವು, ಅವಿವೇಕಿಯು, ವಿಷಯವು,ಸಾಮಾನ್ಯವು, ಅಚೇತನವು, ಪ್ರಸವ ಧರ್ಮಿಯು ಆಗಿರುತ್ತದೆ. ಪುರುಷನು ಇದಕ್ಕೆ ವಿಪರೀತವಾಗಿರುತ್ತಾನೆ ಎಂದರೆ ತ್ರಿಗುಣರಹಿತವಾಗಿಯೂ,ವಿವೇಕ ಉಳ್ಳವನಾಗಿಯೂ, ಅವಿಷಯವು, ಅಸಾಮಾನ್ಯವು, ಚೇತನವು, ಅಪ್ರಸವಧರ್ಮಿಯು ಆಗಿರುತ್ತದೆ. ತ್ರಿಗುಣವೆಂದರೇನು ? 12. ಪ್ರೀತಿ-ಅಪ್ರೀತಿ-ವಿಷಾದಾತ್ಮಕಾ: ಪ್ರಕಾಶ-ಪ್ರವೃತ್ತಿ-ನಿಯಮಾರ್ಥಾ:। ಅನ್ಯೋನ್ಯ-ಅಭಿಭವಾಶ್ರಯ-ಜನನ-ಮಿಥುನ-ವೃತ್ತಯಶ್ಚ ಗುಣಾ:।। ಗುಣಗಳು ಪ್ರೀತಿಯಾತ್ಮಕವು,ಅಪ್ರೀತಿಯಾತ್ಮಕವು ಮತ್ತು ವಿಷಾದಾತ್ಮಕವು ಸತ್ವ,ರಜೋ,ತಮೋ ಗುಣ ಕ್ರಮವಾಗಿ ಆಗಿರುತ್ತದೆ. ಸತ್ವವು ಪ್ರೀತಿಯಾತ್ಮಕವು, ಪ್ರೀತಿ ಎಂದರೆ ಸುಖವು ಎಂದರೆ…
ಸಾಂಖ್ಯ ಕಾರಿಕ 6-10
6. ಸಾಮನ್ಯತಸ್ತು ದೃಷ್ಟಾದತೀಂದ್ರಿಯಾಣ೦ ಪ್ರತೀತಿರನುಮಾನಾತ್ । ತಸ್ಮಾದ್ ಅಪಿ ಚ ಸಿದ್ಧ೦ ಪರೋಕ್ಷ೦ ಆಪ್ತಗಮಾತ್ ಸಿದ್ಧ೦ ।। ಸಾಮಾನ್ಯ ಜ್ಞಾನವು ಪ್ರತ್ಯಕ್ಷ ಪ್ರಮಾಣದಿಂದಲೇ ತಿಳಿಯುತ್ತದೆ. ಯಾವುದು ಇಂದ್ರಿಯ ಅನುಭವದ ವ್ಯಾಪ್ತಿಯಿಂದ ಹೊರಗಿರುತ್ತದೆಯೋ ಅದನ್ನು ಅನುಮಾನದಿಂದ ತಿಳಿಯಬೇಕಾಗುವುದು. ಅನುಮಾನದ ವ್ಯಾಪ್ತಿಯಿಂದಲೂ ಹೊರಗಿರುವುದನ್ನು ಆಪ್ತಾಗಮದಿಂದಲೇ (ಅಂದರೆ ಶಾಸ್ತ್ರ ) ತಿಳಿಯಬೇಕಾಗುವುದು. ಈ ಪ್ರಮಾಣಗಳನ್ನು ಅಂಗೀಕರಿಸಿದ ಮೇಲೂ ನಮಗೆ ಪುರುಷ ಅಥವಾ ಪ್ರಧಾನವನ್ನು ನೋಡಲಾಗುವುದಿಲ್ಲವಲ್ಲ ? ಅದನ್ನು ಹೇಗೆ ಸ್ಪಷ್ಟಿಕರಿಸುತ್ತೀರಿ ಅಂದರೆ 7. ಅತಿದೂರಾತ್ ಸಾಮೀಪ್ಯದ್ ಇಂದ್ರಿಯಘಾತಾನ್ ಮನೋನವಸ್ಥಾನಾತ್…
ಸಾಂಖ್ಯ ಕಾರಿಕ 1-5
1. ದುಃಖಾತ್ರಯಾಭಿಘಾತಾಜಿಜ್ಞಾಸಾ ತದಪಘಾತಕೇ ಹೇತೌ| ದೃಷ್ಟೇಸಾಪಾರ್ಥಾಚೆನ್ನೈ ಕಾಂತಾತ್ಯಂತತೋsಭಾವಾತ್ || ನಾವು ಮೂರು ರೀತಿಯ ದುಃಖಗಳಿಗೆ ಈಡಾಗಿದ್ದೇವೆ. ಅವುಗಳೆಂದರೆ ಆಧ್ಯಾತ್ಮಿಕ, ಆದಿಭೌತಿಕ ಮತ್ತು ಅಧಿ ದೈವಿಕ. ನಮ್ಮ ಶರೀರದಲ್ಲಿ ಉಂಟಾಗುವ ಜ್ವರ, ಶೀತ, ತಲೆ ನೋವು ಮುಂತಾದ ರೋಗಗಳು ಮತ್ತು ಬಯಸಿದ್ದು ಸಿಗದಿರುವಾಗ ಮನಸಿನಲ್ಲಿ ಉಂಟಾಗುವ ವ್ಯಥೆ ಇವನ್ನು ಆಧ್ಯಾತ್ಮಿಕ ದುಃಖವೆನ್ನುವರು. ನಮ್ಮ ಹೊರಗಡೆಯಲ್ಲಿ ಮನುಷ್ಯರು, ಪಶು ಪಕ್ಷಿಗಳು ಕ್ರಿಮಿಕೀಟಗಳು ಮುಂತಾಗಿ ಕಾಣಬರುತಿವೆಯಷ್ಟೆ. ಇವುಗಳಿಂದ ಆಗುವ ದುಃಖಕ್ಕೆ ಆಧಿ ಭೌತಿಕ ದುಃಖವೆಂದು ಹೆಸರು. ಚಳಿ ,ಗಾಳಿ , ಮಳೆ,…
ಸಾಂಖ್ಯ ದರ್ಶನ
ಸಾಂಖ್ಯ ದರ್ಶನವು ಅದ್ವೈತ ದರ್ಶನಕ್ಕೆ ಬಹಳ ಹತ್ತಿರವಾದ ದರ್ಶನ. “ದೃಶ್ಯತೆ ಅನೇನ ಇತಿ” ಅಂದರೆ ಯಾವುದರ ಮೂಲಕ ಸತ್ಯವನ್ನು ನೋಡುತ್ತೇವೋ ಅದುವೇ ದರ್ಶನ (Philosophy). ಕಪಿಲ ಮಹರ್ಷಿ ಈ ದರ್ಶನದ ದಾರ್ಶನಿಕ. ನಮ್ಮ ಪರಂಪರೆಯಲ್ಲಿ ಬಂದಿರುವ ಆರು ಆಸ್ತಿಕ ದರ್ಶನಗಳಲ್ಲಿ ಇದು ಮೊದಲನೆಯ ದರ್ಶನವಾಗಿದೆ. ಸಾಮಾನ್ಯವಾಗಿ ಆಸ್ತಿಕ ಎಂಬ ಪದವನ್ನು ದೇವರಲ್ಲಿ ನಂಬಿಕೆ ಎಂದು ಅರ್ಥೈಸುತ್ತಾರೆ. ಆದರೆ ಇಲ್ಲಿ ಅದನ್ನು ಯಾರು ವೇದಗಳನ್ನು ಪ್ರಮಾಣವಾಗಿ ಸ್ವೀಕರಿಸುತ್ತಾರೋ ಅವರನ್ನು “ಆಸ್ತಿಕ” ಎಂದು ಕರೆಯಲಾಗಿದೆ. ಕಪಿಲ ಮಹರ್ಷಿಯು ಸಾಂಖ್ಯ ದರ್ಶನವನ್ನು…