61. ಪ್ರಕೃತೆ: ಸುಕುಮಾರತರಂ ನ ಕಿಂಚದ್ ಅಸ್ತಿತಿ ಮೇ ಮತಿರ್ಭವತಿ ।
ಯಾ ದೃಷ್ಟಾಸ್ಮೀತಿ ಪುನರ್ನದರ್ಶನ ಮುಪೈತಿ ಪುರುಷಸ್ಯ ।।
ಈ ಲೋಕದಲ್ಲಿ ಸುಖ ಕೊಡುವಂತಹ ಯಾವುದೇ ರೀತಿಯ ವಸ್ತುವಿಲ್ಲ ಎಂಬ ಮತಿಯು ಉತ್ಪನ್ನವಾದಾಗ ಪುರುಷನಿಗೆ ಪ್ರಕೃತಿಯ ನಿಜ ಸ್ವರೂಪದ ಅರಿವು ಉಂಟಾದಮೇಲೆ, ಪ್ರಕೃತಿಯು ಪುನಃ ದರ್ಶನವನ್ನು ಕೊಡುವುದಿಲ್ಲ, ನಿವೃತ್ತಿ ಹೊಂದುವಳು.
ಲೋಕ ರೂಢಿ ಇರುವಂತೆ ಈ ಪುರುಷನು ಮುಕ್ತನು ,ಇವನು ಸಂಸಾರಿ ಎಂದೆಲ್ಲಾ ಹೇಳುತ್ತಾರೆ? ಇದು ಹೇಗೆ?
62.ತಸ್ಮಾದ್ ನ ಬಧ್ಯತೆನಾಪಿಮುಚ್ಯತೆ ನಾಪಿ ಸಂಸರತಿ ಕಶ್ಚಿತ್ ।
ಸಂಸರತಿ ಬಧ್ಯತೆ ಮುಚ್ಯತೆ ಚ ನಾನಾಶ್ರಯಾ ಪ್ರಕೃತಿ: ।।
ಪುರುಷನು ಯಾವುದೇ ರೀತಿಯ ಬಂಧನಕ್ಕೆ ಒಳಗಾಗುವುದಿಲ್ಲ ಯಾವುದರಿಂದಲೂ ಮುಕ್ತಿ ಪಡೆಯುವುದಿಲ್ಲ. ಸಂಸಾರದಲ್ಲೂ ಇರುವುದಿಲ್ಲ.
ಏಕೆಂದರೆ ಪುರುಷನು ಅಸಂಗನು.
ಆದರೆ ಪ್ರಕೃತಿಯೇ ನಾನಾಶ್ರಯದಿಂದ ಅಂದರೆ ದೇವಾ, ಮನುಷ್ಯ ಮತ್ತು ತಿರ್ಯಗ್ ಪ್ರಾಪ್ತಿಯಾಗಿ, ಮಹದಾದಿಯೊಂದಿಗೆ ಸಂಬಂಧಿತವಾಗಿ ಬಂಧನದಲ್ಲಿ, ಸಂಸಾರದಲ್ಲಿ ತನ್ನನ್ನು ತಾನು ನೋಡುತ್ತಾಳೆ. ಯಾವಾಗ ಪುರುಷನಿಗೆ ತಾನು ಪ್ರಕೃತಿಯಿಂದ ಬೇರೆಯೆನೆಂಬ ಜ್ಞಾನವಾಗುವುದೋ ಆಗ ತನ್ನ ನಿಜ ಸ್ವರೂಪವನ್ನು ಅರಿಯುವನು. ಹಾಗಾದರೆ ಪುರುಷನಿಗೆ ಬಂಧನವೇ ಇಲ್ಲದಿದ್ದರೆ ಮೋಕ್ಷವೆಲ್ಲಿಂದ ಬಂತು?
ಮೊದಲೇ ಹೇಳಿದಂತೆ ಪ್ರಕೃತಿಯೇ ತನ್ನನ್ನು ತಾನು ಬಂಧನದಲ್ಲಿ ,ಮೋಕ್ಷದಲ್ಲಿ ಹಾಕಿಕೊಳ್ಳುತ್ತಾಳೆ. ಸೂಕ್ಷ್ಮ ಶರೀರವೇನಿದೆ ಪ್ರಾರಬ್ದವಶದಿಂದ ತ್ರಿವಿಧ ಕರಣದಿಂದ ಮೂರು ಪ್ರಕಾರವಾದ ಬಂಧನದಲ್ಲಿ ಸಿಕ್ಕಿಕೊಳ್ಳುತ್ತದೆ.(ಪ್ರಾಕೃತಿಕ, ವೈಕಾರಿಕ ಮತ್ತು ದಾಕ್ಷಿಣ್ಯ ಬಂಧ). ಸೂಕ್ಷ್ಮ ಶರೀರವು ಧರ್ಮ ಅಧರ್ಮ ಸಹಿತವಾಗಿದೆ.
ಪ್ರಕೃತಿಯೇ ತನ್ನನ್ನು ತಾನು ಬಂಧನದಲ್ಲಿ ,ಮೋಕ್ಷದಲ್ಲಿ ಹಾಕಿಕೊಳ್ಳುತ್ತಾಳೆ . ಇದು ಹೇಗೆ ?
63, ರೂಪೈ: ಸಪ್ತಭಿರೇವತು ಬಧ್ನಾತಿ ಆತ್ಮಾನಾಮ್ ಆತ್ಮನಾ ಪ್ರಕೃತಿ: ।
ಸೈವ ಸ ಪುರುಷಾರ್ಥಂ ಪ್ರತಿ ವಿಮೋಚಯತಿ ಏಕರೂಪೇಣ ।।
ರೂಪವು ಏಳು ಅವುಗಳೆಂದರೇ ಧರ್ಮ, ವೈರಾಗ್ಯ, ಐಶ್ವರ್ಯ, ಅಧರ್ಮ, ಅಜ್ಞಾನ, ಅನೈಶ್ವರ್ಯ, ಅವೈರಾಗ್ಯ.(ಜ್ಞಾನವನ್ನು ಹೊರೆತು ಪಡಿಸಿ).
ಇದರಿಂದ ತನನ್ನು ತಾನು ಬಂಧನಕೊಳಗಾಗುವಂತೆ ಮಾಡುತ್ತಾಳೆ ಮತ್ತು ತನ್ನಿಂದಲೇ ಪುರುಷನಿಗಾಗಿ ಏಕರೂಪ ಜ್ಞಾನದಿಂದ ಪುರುಷನಿಗೆ ಮೋಕ್ಷ ಕೊಡಿಸುವಳು.
ಈ ಜ್ಞಾನವು ಹೀಗೆ ಉತ್ಪನ್ನವಾಗುತ್ತದೆ ?
64. ಏವಂ ತತ್ವಾಭಾಸ್ಯಾತ್ ನ ಅಸ್ಮಿ ನ ಮೇ ನಾಹಂ ಇತಿ ಅಪರಿಶೇಷಮ್ ।
ಅವಿಪರ್ಯಯಾದ್ ವಿಶುದ್ಧ೦ ಕೇವಲಂ ಉತ್ಪದ್ಯತೇ ಜ್ಞಾನಮ್ ।।
ಪಂಚವಿ೦ಶತಿ(೨೫) ತತ್ವಗಳನ್ನು ಆಲೋಚಿಸಿ ಅಭ್ಯಾಸ ಮಾಡುವುದರಿಂದ, ಇದು ಪ್ರಕೃತಿ ನಾನು ಪುರುಷ ಇವೆಲ್ಲಾ ಪಂಚ ತನ್ಮಾತ್ರೆಗಳು, ಇಂದ್ರಿಯ, ಮಹಾಭೂತಗಳು ಎಂದು ಅಭ್ಯಾಸ ಮಾಡುವುದರಿಂದ, ಪುರುಷನಿಗೆ ಜ್ಞಾನ ಉತ್ಪತ್ತಿಯಾಗುವುದು
‘ನ ಅಸ್ಮಿ’ ಅಂದರೆ ನಾನು ಎಂದು ಈ ಸಂಸಾರದಲ್ಲಿ ಇರಲಿಲ್ಲ. ‘ನ ಮೆ’ ನನಗೆ ಈ ಶರೀರದ ಸಂಬಂಧವಿರಲು ಸಾಧ್ಯವೇ ಇಲ್ಲ. ನಾನು ಬೇರೆ ಶರೀರವು ಬೇರೆ. ‘ನಾಹಂ ಇತಿ ಅಪರಿಶೇಷಮ್- ಶರೀರದ ಸಂಬಂಧದಿಂದ ಅಹಂಕಾರ ಉತ್ಪತ್ತಿಯಾಗುವುದು, ನಾನೇ ಬೇರೆ ಶರೀರವೇ ಬೇರೆ ಎಂದಾಗ ಅಹಂಕಾರವು ಇಲ್ಲದಾಗುವುದು. ಹೀಗೆ ಪೂರ್ಣವಾಗಿ ೩ ಕಾಲದ ಜ್ಞಾನವಾಗುವುದು. ಶುದ್ಧ ಜ್ಞಾನ(ಅವಿಪರ್ಯಯಾ) ಯಾವಾಗ ಪ್ರಾಪ್ತಿಯಾಗುವುದು ಅದರಿಂದ ಕೈವಲ್ಯ ಪ್ರಾಪ್ತಿಯಾಗುವುದು.
ಜ್ಞಾನವಾದ ಮೇಲೆ ಪುರುಷನು ಏನು ಮಾಡುವನು ?
65. ತೇನ ನಿವೃತ್ತಿ ಪ್ರಸವಾಮ್ ಅರ್ಥ ವಶಾತ್ ಸಪ್ತ ರೂಪ ವಿನಿವೃತ್ತಾಮ್ ।
ಪ್ರಕೃತಿಂ ಪಶ್ಯತಿ ಪುರುಷ: ಪ್ರೇಕ್ಷಕ ವದವಸ್ಥಿತ: ಸ್ವಸ್ಥ: ।।
ಈ ರೀತಿಯಾದ ಶುದ್ಧಜ್ಞಾನದಿಂದ ಪುರುಷನು ಪ್ರಕೃತಿಯನ್ನು ಪ್ರೇಕ್ಷಕನಂತೆ (ಸಾಕ್ಷಿ ರೂಪವಾಗಿ)ನೋಡುತ್ತಾನೆ. ಹೇಗೆ ಪ್ರೇಕ್ಷಕನು ಒಂದೇ ಕಡೆ ಕುಳಿತು ನೋಡುತ್ತಾನೋ ಹಾಗೆಯೇ ಪುರುಷನು ಸ್ವಸ್ಥ: ಅಂದರೆ ಪ್ರಕೃತಿಯನ್ನು ಸಾಕ್ಷಿ ರೂಪವಾಗಿ ನೋಡುತ್ತಿರುತ್ತಾನೆ. ಏಳು ರೂಪವೇನಿದೆ ಧರ್ಮ,ವೈರಾಗ್ಯ,ಐಶ್ವರ್ಯ,ಅಧರ್ಮ,ಅಜ್ಞಾನ,ಅನೈಶ್ವರ್ಯ,ಅವೈರಾಗ್ಯ ಇವುಗಳಿಂದ ನಿವೃತ್ತಿ ಹೊಂದುವನು.