56. ಇತ್ಯೇಷ ಪ್ರಕೃತಿಕೃತೋ ಮಹದಾದಿ ವಿಶೇಷ ಭೂತ ಪರ್ಯಂತಃ।
ಪ್ರತಿ ಪುರುಷ ವಿಮೋಕ್ಷಾಯ ಸ್ವಾರ್ಥ ಇವ ಪರಾರ್ಥ ಆರಂಭ: ।।
‘ಇತ್ಯೇಷ’ ಎಂಬುದನ್ನು ವಿಚಾರ ಪರಿಸಮಾಪ್ತಿ ಹಾಗೂ ಯಾವ ಕಾರಣಕ್ಕಾಗಿ ಸೃಷ್ಟಿ ಎಂಬ ವಿಚಾರದ ನಿರ್ದೇಶನಕ್ಕಾಗಿ ಉಪಯೋಗಿಸಲಾಗಿದೆ.
ಪ್ರಕೃತಿಯಿಂದ ಮಹದಾದಿಯಾಗಿ ಸೃಷ್ಟಿಯಾಗಿದೆ.ಅಂದರೆ ಪ್ರಕೃತಿಯಿಂದ ಮಹತ್, ಮಹತ್ ಇಂದ ಅಹಂಕಾರ, ಅದರಿಂದ ತನ್ಮಾತ್ರೆಗಳು, ಏಕಾದಶ ಇಂದ್ರಿಯಗಳು ಮತ್ತು ತನ್ಮಾತ್ರೆಯಿಂದ ಪಂಚಮಹಾಭೂತಗಳು ಸೃಷ್ಟಿಯಾಗಿದೆ.
ಈ ಸೃಷ್ಟಿಯು ಏತಕ್ಕಾಗಿ ಅಂದರೆ ಪ್ರತಿ ಪುರುಷನ ಮೋಕ್ಷಕ್ಕಾಗಿ, ಪ್ರತಿ ಪುರುಷನೆಂದರೆ ಯಾರು ಪ್ರಾರಬ್ಧವಶಾತ್ ದೇವ, ಮನುಷ್ಯ ಅಥವಾ ತಿರ್ಯಗ್ ಯೋನಿ ಪ್ರಾಪ್ತಿಯಾಗಿದೆಯೋ ಆ ಪುರುಷನೆಂದರ್ಥ. ಆ ಪುರುಷನನ್ನು ಮುಕ್ತಗೊಳಿಸಿ ಸರಿಯಾದ ತತ್ವವನ್ನು ತೋರಿಸಲೆಂದೇ ಈ ಸೃಷ್ಟಿ.
ಪ್ರಕೃತಿ ಹೇಗೆ ಮಾಡುತ್ತಿದೆ ಎಂದರೆ ಹೇಗೆ ಸ್ವಾರ್ಥಕ್ಕಾಗಿ ಮಾಡುತ್ತಾರೋ ಹಾಗೆ ಪರಾರ್ಥಕ್ಕಾಗಿ ಮಾಡುತ್ತದೆ. ಹೇಗೆ ಕೆಲ ಮನುಷ್ಯ ತನ್ನ ಕೆಲಸ ಬಿಟ್ಟು ಮಿತ್ರನ ಕೆಲಸ ಮಾಡುತ್ತಾರೋ ಹಾಗೆ ಪ್ರಕೃತಿಯು ಪುರುಷನ ಮೋಕ್ಷಕ್ಕಾಗಿ ಸದಾ ದುಡಿಯುತ್ತಿರುತ್ತದೆ.
ಆದರೆ ಪುರುಷನು ಯಾವುದೇ ಪ್ರತ್ಯುಪಕಾರವನ್ನು ಮಾಡುವುದಿಲ್ಲ.
ಸರಿ ಪೂರ್ವದಲ್ಲಿ ಹೇಳಿದಂತೆ ಪುರುಷನು ಚೇತನವು ಮತ್ತು ಪ್ರಕೃತಿಯ ಅಚೇತನವು. ಅಚೇತನವಾದ ಪ್ರಕೃತಿಯು ಪುರುಷನಿಗೆ ಶಬ್ದಾದಿಯ ಉಪಲಬ್ಧಿ ಮಾಡಿಸಬೇಕು ಮತ್ತು ಅಂತಿಮವಾಗಿ ಮೋಕ್ಷವನ್ನು ಕೊಡಿಸಬೇಕು. ಇದು ಹೇಗೆ ಸಾಧ್ಯ ?ಅಚೇತನವಾದ ಪ್ರಕೃತಿ ಚೇತನವಾಗಿ ಹೇಗೆ ಪ್ರವರ್ತಿಸುತ್ತದೆ.
ಇದು ಸತ್ಯ ಆದರೆ ಬರಿಯೇ ಚೇತನದಲ್ಲಿ ಈ ರೀತಿ ಪ್ರವೃತ್ತಿಯಿರಬೇಕೆಂಬ ನಿಯಮವೇನು ಇಲ್ಲ. ಮುಂದಿನ ಕಾರಿಕೆಯಲ್ಲಿ ನೋಡಬಹುದು.
57. ವತ್ಸ-ವಿವೃದ್ಧಿನಿಮಿತ್ತಂ ಕ್ಷೀರಸ್ಯ ಪ್ರವೃತ್ತಿರಜ್ಞಸ್ಯ ।
ಪುರುಷ ವಿಮೋಕ್ಷನಿಮಿತ್ತಂ ತಥಾ ಪ್ರವೃತ್ತಿ: ಪ್ರಧಾನಸ್ಯ ।।
ಹೀಗೆ ಹಸು ತಿನ್ನುವ ಹುಲ್ಲು ಇತ್ಯಾದಿ ಕರುವಿನ ಬೆಳವಣಿಗೆಗಾಗಿ ಹಾಲಾಗಿ ಪರಿವರ್ತನೆ ಹೊಂದುತ್ತದೆ. ಹಾಗೆಯೇ ಪುರುಷನ ಮೋಕ್ಷಕ್ಕಾಗಿ ಅಜ್ಞವಾದ ಪ್ರಧಾನದ ಪ್ರವೃತ್ತಿ ಉಂಟಾಗಿದೆ.ಅಷ್ಟೇ ಅಲ್ಲ.
58.ಔತ್ಸುಕ್ಯ ನಿವೃತ್ತ್ಯರ್ಥಂ ಯಥಾ ಕ್ರಿಯಾಸ್ತು ಪ್ರವರ್ತತೇ ಲೋಕ: ।
ಪುರುಷಸ್ಯ ವಿಮೋಕ್ಷಾರ್ಥಂ ಪ್ರವರ್ತತೆ ತದವದವ್ಯಕ್ತಮ್ ।।
ಹೇಗೆ ಇಷ್ಟ ವಿಷಯ ಪ್ರಾಪ್ತಿಗಾಗಿ ಲೋಕದಲ್ಲಿ ಎಲ್ಲರು ಪ್ರವೃತ್ತಿ ಹೊಂದುತ್ತಾರೋ, ಹಾಗೆಯೇ ಪುರುಷನ ಭೋಗ ಮತ್ತು ಮೋಕ್ಷಕ್ಕಾಗಿ ಪ್ರಕೃತಿಯು ಪ್ರವೃತ್ತಿ ಹೊಂದುತ್ತದೆ. ಮೋಕ್ಷವಾದ ಮೇಲೆ ನಿವೃತ್ತಿ ಹೊಂದುತ್ತದೆ. ಅಷ್ಟೇ ಅಲ್ಲ.
59. ರಂಗಸ್ಯ ದರ್ಶಯಿತ್ವಾ ನಿವರ್ತತೆ ನರ್ತಕೀ ಯಥಾ ನೃತ್ಯಾತ್ ।
ಪುರುಷಸ್ಯ ತಥಾತ್ಮಾನಂ ಪ್ರಕಾಶ್ಯ ವಿನಿವರ್ತತೆ ಪ್ರಕೃತಿ: ।।
ಹೇಗೆ ನರ್ತಕಿಯು ರಂಗದ ಮೇಲೆ ವಿವಿಧ ಭಾವ ಪ್ರದರ್ಶನ ಮಾಡಿ, ನೃತ್ಯ ಮುಗಿದ ಕೂಡಲೇ ರಂಗದಿಂದ ನಿವೃತ್ತಿ ಹೊಂದುವಳೋ ಹಾಗೆಯೇ ಪ್ರಕೃತಿಯು ಪುರುಷನಿಗೆ ಸಸ್ವರೂಪ ದರ್ಶನ ಮಾಡಿಸಿ, ಮೋಕ್ಷವಾದಮೇಲೆ ನಿವೃತ್ತಿ ಹೊಂದುವುದು.
ಇದರ ಹೇತು ಏನು ?
60.ನಾನಾವಿಧೈ: ಉಪಾಯೈ: ಉಪಕಾರಣಿ ಅನುಪಕಾರಿಣ: ಪುಂಸ: ।
ಗುಣವತಿ ಅಗುಣ್ಯಸ್ಯ ಸತ: ತಸ್ಯಾರ್ಥಂ ಅಪಾರ್ಥಕಂ ಚರತಿ ।।
ಪ್ರಕೃತಿಯು ನಾನಾ ವಿಧವಾದ ಉಪಾಯದಿಂದ ಉಪಕಾರಣಿ ಮತ್ತು ಅನುಪಕಾರಣಿ ರೂಪವನ್ನು ಧರಿಸಿ ಪುರುಷನಿಗೆ ಅವನ ವಿವಿಧ ರೂಪವನ್ನು ತೋರಿಸಿ ತಾನು(ಪ್ರಕೃತಿ) ಬೇರೆ ನೀನು(ಪುರುಷ) ಬೇರೆ ಎಂದು ದರ್ಶನ ಮಾಡಿಸಿ, ಮೋಕ್ಷಪ್ರಾಪ್ತಿಯಾದ ನಂತರ ನಿವೃತ್ತಿ ಹೊಂದುವಳು.
ಹೀಗೆ ಪ್ರಕೃತಿಯು ಯಾವುದೇ ಫಲಾಪೇಕ್ಷೆಯಿಲ್ಲದೆ ಪುರುಷನ ಮೋಕ್ಷಕ್ಕಾಗಿ ಕೆಲಸ ಮಾಡುವಳು. ನಿವೃತ್ತಿಯಾದ ಮೇಲೆ (ಕಾರಿಕ ೫೯) ನರ್ತಕೀ ಏನು ಮಾಡುವಳು.