46. ಏಷ ಪ್ರತ್ಯಯ ಸರ್ಗೋ ವಿಪಾರ್ಯಯಾ ಶಕ್ತಿ-ತುಷ್ಟಿ-ಸಿದ್ಧಾಖ್ಯಾ: ।
ಗುಣ ವೈಷಮ್ಯವಿಮರ್ದಾತ್,ತಸ್ಯ ಚ ಭೇದಾಸ್ತು ಪಂಚಶತ್ ।।
ನಿಮಿತ್ತ-ನೈಮಿತ್ತಿಕದ ೧೬ ಭೇದಗಳನ್ನು ಹೇಳಿಯಾಯಿತೋ ಅದನ್ನು ಪ್ರತ್ಯಯ ಸರ್ಗ ವೆನ್ನುತ್ತಾರೆ.ಪ್ರತ್ಯಯವೆಂದರೆ ಬುದ್ಧಿ*. ‘ಅಧ್ಯಾವಸಾಯೋ ಬುದ್ಧಿ*’ ಇತ್ಯಾದಿ ಶ್ಲೋಕದಿಂದ ಸಿದ್ಧವಾಗಿದೆ.
ಈ ಪ್ರತ್ಯಯ ಸರ್ಗವು ನಾಲ್ಕು ವಿಧವಾಗಿದೆ.
೧)ವಿಪರ್ಯಯಾ ೨)ಅಶಕ್ತಿ ೩)ತುಷ್ಟಿ ೪)ಸಿದ್ಧಿ
ವಿಪರ್ಯಯವೆಂದರೆ ಸಂಶಯವು ಅಥವಾ ಅಜ್ಞಾನವು.ಉದಾ :ಸ್ಥಾಣುವನ್ನು ನೋಡಿ ಇದು ಸ್ಥಾಣುವೋ ಪುರುಷನೋ ಎಂಬ ಸಂಶಯ ಉಂಟಾಗುವುದು. ವಿಪರ್ಯಯಾ.
ಇದು ಸ್ಥಾಣುವೇ ಆಗಿದೆ ಅಥವಾ ಪುರುಷನೇ ಆಗಿದೆ ಎಂದು ಖಚಿತವಾಗಿ ಹೇಳುವ ಸಾಮಾರ್ಥ್ಯವಿಲ್ಲದು ಅಶಕ್ತಿ.
ಸ್ಥಾಣುವಾದರೇನು,ಪುರುಷ-ನಾದರೇನು ಎಂಬ ಉದಾಸೀನ ಭಾವವು ತುಷ್ಟಿ.
ಅನುಮಾನದಿಂದ ಇದು ಸ್ಥಾಣುವೇ ಆಗಿದೆ ಎಂದು ನಿರ್ಧರಿಸುವುದು ಸಿದ್ಧಿಯಾಗಿದೆ.
ಈ ರೀತಿಯ ನಾಲ್ಕು ವಿಧವಾದ ಪ್ರತ್ಯಯ ಸರ್ಗವೇನಿದೆ ಇದು ಗುಣದ ಭೇದದಿಂದ ೫೦ ರೀತಿಯಾಗುತ್ತದೆ.
47. ಪಂಚ ವಿಪರ್ಯಯಭೇದಾ ಭವತಿ ಅಶಕ್ತಿಶ್ಚ ಕರಣ ವೈಕಲ್ಯಾತ್ ।
ಅಷ್ಟಾವಿಂಶತಿ ಭೇದಾ ತುಷ್ಟಿ: ನವದಾ ಅಷ್ಟಧಾ ಸಿದ್ಧಿ: ।।
ಪಂಚ ವಿಪರ್ಯಯ ಭೇದವೆಂದರೇ ತಮವು ,ಮೋಹವು,ಮಹಾಮೋಹವು,ತಾಮಿಸ್ರವು,ಅಂಧತಾಮಿಸ್ರವು.ಈ ಭೇದವು ಕೂಡ ಬಹು ರೀತಿಯಾಗಿದೆ.
ಅಶಕ್ತಿಯಿಂದ ೨೮ ಭೇದವುಂಟಾಗುತ್ತದೆ. ತುಷ್ಟಿಯು ೯ ಪ್ರಕಾರವಾಗಿದೆ.(ರಜೋಗುಣಯುಕ್ತವಾದ ಜ್ಞಾನವನ್ನು ತುಷ್ಟಿಯನ್ನುವರು)
ಸಿದ್ಧಿಯು ೮ ವಿಧವಾಗಿದೆ.
ವಿಪರ್ಯಯ ಭೇದವೇನು?
48.ಭೇದಸ್ತಮಸೋsಷ್ಟವಿಧ:,ಮೋಹಸ್ಯ ಚ ದಶವಿಧೋ ಮಹಾಮೋಹ: ।
ತಾಮಿಸ್ರೋ ಅಷ್ಟಾದಶಧಾ ತಥಾ ಭವತಿ ಅಂಧತಾಮಿಸ್ರ: ।।
ತಾಮಸವು ೮ ಪ್ರಕಾರವಾಗಿದೆ .
ಅವು ೮ ಪ್ರಕಾರದ ಪ್ರಕೃತಿಯಲ್ಲಿ ಲಯವಾಗುತ್ತದೆ. ಲಯವಾಗುವುದರಿಂದ ನಾನು ಮುಕ್ತನಾದೆ ಎಂಬುದು ತಮೋ ಭೇದವಾಗಿದೆ.
ಮೋಹದ ಭೇದವು ಕೂಡ ೮ ಪ್ರಕಾರವಾಗಿದೆ. ೮ ಪ್ರಕಾರದ ಐಶ್ವರ್ಯವಿದೆ. ಈ ಐಶ್ವರ್ಯದ ಮೇಲೆ ಉಂಟಾದ ಮೋಹದಿಂದ ಇಂದ್ರಾದಿ ದೇವತೆಗಳಿಗೂ ಮೋಕ್ಷ ಪ್ರಾಪ್ತಿಯಾಗುವುದಿಲ್ಲ, ಐಶ್ವರ್ಯವು ಕ್ಷಯವಾದರೆ ಸಂಸಾರಕ್ಕೆ ಮರಳುತ್ತಾರೆ.
ಮಹಾ ಮೋಹವು ೧೦ ಪ್ರಕಾರವಾಗಿದೆ. ಶಬ್ದಾದಿ ಐದು ವಿಷಯಗಳು ದೇವತೆಗಳಿಗೆ ಮನುಷ್ಯರಿಗೆ ಸಾಮಾನ್ಯವಾಗಿದೆ. ದೇವತೆಗಳಿಗೆ ಇದು ಸುಖ ಪ್ರಾಪ್ತಿ ಮಾಡಿಸಿದರೆ,ಮನುಷ್ಯರಿಗೆ ಸುಖ-ದುಃಖ ಎರಡು ಇರುತ್ತದೆ.
ತಾಮಿಸ್ರವು ೧೮ ಪ್ರಕಾರವಾಗಿದೆ. ದೃಷ್ಪಶ್ರವಿಕವಾದ ೧೦ ವಿಷಯ ಪ್ರಾಪ್ತಿ ಮತ್ತು ೮ ಐಶ್ವರ್ಯ ಇದು ಪ್ರಾಪ್ತಿಯಾದಾಗ ತುಂಬಾ ಖುಷಿಯಾಗಿಯೂ ವಿಯೋಗದಿಂದ ದುಃಖಿತನಾಗಿಯೂ ಇರುವುದೇ ತಾಮಿಸ್ರವು.
ಅಂಧ ತಾಮಿಸ್ರವು ತಾಮಿಸ್ರದಂತೆ ೧೮ ಪ್ರಾಕಾರವಾಗಿದೆ.೧೦ ವಿಷಯ ಪ್ರಾಪ್ತಿ ಮತ್ತು ೮ ಐಶ್ವರ್ಯಯುಕ್ತವಾಗಿದೆ.ಆದರೆ ಅಂಧ ತಾಮಿಸ್ರದಿಂದ ಸ್ವತಃ ಜೀವನು ಮರಣ ಹೊಂದುತ್ತಾನೆ ಅಥವಾ ವಿಷಯವನ್ನು ಅನುಭವಿಸುವ ಶಕ್ತಿ ರಹಿತನಾಗುತ್ತಾನೆ.ಅಂಧ ತಾಮಿಸ್ರವು ತಾಮಿಸ್ರಕ್ಕಿಂತ ಹೆಚ್ಚು ದುಃಖಯುಕ್ತವಾಗಿರುತ್ತದೆ.
ಇದೆ ವಿಪರ್ಯಯದ ಭೇದವಾಗಿದೆ.
ಅಶಕ್ತಿಯ ಭೇದವೇನು ?
49. ಏಕಾದಶೋನ್ದ್ರಿಯವಧ: ಸಹ ಬುದ್ಧಿವಧೈರ್ ಅಶಕ್ತಿರ್ ಉದ್ದಿಷ್ಟಾ ।
ಸಪ್ತದಶಾವಧಾ ಬುದ್ಧೆರ್ವಿಪರ್ಯಾಯಾತ್ ತುಷ್ಟಿ ಸಿದ್ಧಿನಾಮ್ ।।
ಕರಣ ವೈಕಲ್ಯತೆಯಿಂದ ೨೮ ರೀತಿಯ ಅಶಕ್ತಿಯ ಭೇದವನ್ನು ಕಾಣಬಹುದು.
“ಏಕಾದಶೋನ್ದ್ರಿಯವಧ:” ಎಂದರೆ ಪ್ರತಿಯೊಂದು ಇಂದ್ರಿಯವು ಕೆಲಸ ಮಾಡದಿದ್ದರೆ ಅದರಿಂದ ಉಂಟಾಗುವ ವೈಕಲ್ಯತೆ.ಉದಾ : ಕುರುಡು, ಮೂಕತೆ, ಪ್ರಸುಕ್ತಿ, ಅಜಿಹ್ವಿಕ, ಘ್ರಾಣ ಪಾಕ, ಕುಂಟು, ಕುರುಡು, ಉನ್ಮಾದಿ ಇತ್ಯಾದಿ.
‘ಸಪ್ತದಶಾವಧಾ’ ಎಂದರೆ ನವಧಾ ತುಷ್ಟಿ: ಅಷ್ಟದಾ ಸಿದ್ಧಿ: ಎಂದು ಏನು ಪೂರ್ವದಲ್ಲಿ ಹೇಳಿದೆ ಅದರ ವಿಪರೀತದಿಂದ ಉಂಟಾಗುವ ಅಶಕ್ತಿ.
ಹೀಗೆ “ಏಕಾದಶ ಇಂದ್ರಿಯ ವಧ:” ಮತ್ತು ‘ಸಪ್ತದಶಾವಧಾ’ ಇದರಿಂದ ೨೮ ಅಶಕ್ತಿಯು ಆಗುತ್ತದೆ.
ತುಷ್ಟಿಯ ಒಂಬತ್ತು ರೂಪಗಳು ಏನು ?
50. ಆಧ್ಯಾತ್ಮಿಕಾಶ್ಚತಸ್ರ : ಪ್ರಕೃತಿ-ಉಪಾದಾನ-ಕಾಲ-ಭಾಗ್ಯ-ಆಖ್ಯಾ: ।
ಬಧ್ಯಾ ವಿಷಯೋಪರಮಾತ್ ಪಂಚ,ನವ,ತುಷ್ಟಯೋಭಿಮತಾ: ।।
‘ಆಧ್ಯಾತ್ಮನಿ ಭವ ಆಧ್ಯಾತ್ಮಕಾ’ ಅಂದರೆ ತನ್ನಲೇ ಆಗುತ್ತಿರುವುದು.
ತುಷ್ಟಿಯ ಪ್ರಕೃತಿ-ಉಪಾದಾನ-ಕಾಲ-ಭಾಗ್ಯ-ಭೇದಗಳು ಪ್ರಚಲಿತವಾಗಿದೆ.
ಪ್ರಕೃತಿ-ಪ್ರಕೃತಿಯೆಂದರೇನು,ಅದರ ಸಗುಣ ರೂಪವೇನು ಎಂಬ ಅರಿವಿದ್ದರೂ ಪ್ರಕೃತಿ ಮತ್ತು ಪುರುಷನ ಭೇದವನ್ನು ಅರಿಯದಿರುವುದು ಮತ್ತು ತಿಳಿಯುವ ಪ್ರಯತ್ನವನ್ನು ಮಾಡದಿರುವುದು. ಇದೇ ಮೋಕ್ಷವೆಂದು ತಿಳಿದುಕೊಳ್ಳುವುದು. ಇದನ್ನೇ ಪ್ರಕೃತಿ ತುಷ್ಟಿ ಎನ್ನುವರು.
ಉಪಾದಾನಾಖ್ಯಾ: – ವಿವಿದಿಶಾ ಸನ್ಯಾಸಿಗಳಂತೆ ಯಾರು ಇರುತ್ತಾರೋ ಮತ್ತು ಸನ್ಯಾಸವೇ ಅಂತಿಮವೆಂದು ತಿಳಿದು ಕೊಂಡಿರುತ್ತಾರೋ ಅದಕ್ಕೆ ಉಪಾದಾನಾಖ್ಯಾ ತುಷ್ಟಿ ಎನ್ನುವರು.
ಕಾಲ – ಪ್ರಾರಬ್ಧ ವಶಾತ್ ಮೋಕ್ಷ ದೊರಕುವುದೆಂದು ಅಥವಾ ಸೃಷ್ಟಿಯ ಸಮಾಪ್ತಿಯಲ್ಲಿ ಮೋಕ್ಷ ದೊರಕುವುದೆಂದು ಯಾರು ಸುಮ್ಮನೆ ಕುಳಿತಿರುತ್ತಾರೋ ಅವರಿಗೆ ಮೋಕ್ಷ ದೊರಕದು. ಇದಕ್ಕೆ ಕಾಲ ತುಷ್ಟಿ ಎನ್ನುವರು.
ಭಾಗ್ಯ-ನನ್ನ ಭಾಗ್ಯದಲ್ಲಿ ಮೋಕ್ಷವಿದ್ದರೆ,ಜಾತಕ ಕುಂಡಲಿಯಲ್ಲಿ ಮೋಕ್ಷ ಲಕ್ಷಣಗಳು ಕಾಣ ಸಿಕ್ಕರೆ ಮೋಕ್ಷ ಸಿಗುವುದು ಎಂದರುತ್ತಾರೋ ಅವರಿಗೂ ಮೋಕ್ಷಪ್ರಾಪ್ತಿಯಿಲ್ಲ.ಇದನ್ನು ಭಾಗ್ಯ ತುಷ್ಟಿ ಎನ್ನುವರು.
ಬಾಹ್ಯಾನ್ದ್ರಿಯಗಳ ಉಪರಿತಿಯು ಕೂಡ ತುಷ್ಟಿಯೇ ಆಗಿದೆ. ಶಬ್ದ,ಸ್ಪರ್ಶ,ರೂಪ,ರಸ,ಗಂಧ ಇವುಗಳಲ್ಲಿ ಅರ್ಜನೆ, ರಕ್ಷಣೆ, ದುಃಖ, ಕ್ಷಯ ದುಃಖ, ಸಂಗತಿ ದುಃಖ, ಹಿಂಸ ದುಃಖ ದರ್ಶನವಾಗುವುದರಿಂದ ಉಪರತಿ ಉಂಟಾಗುತ್ತದೆ.
ಅರ್ಜನೆ ಎಂದರೆ ಸಂಪಾದನೆ,ಸಂಪಾದನೆ ಮಾಡುವುದು ದುಃಖವಾಗಿದೆ, ಸಂಪಾದಿಸಿದ ಆಸ್ತಿಯನ್ನು ರಕ್ಷಣೆ ಮಾಡುವುದು ದುಃಖವಾಗಿದೆ. ಉಪಭೋಗದಿಂದ ಕ್ಷಯ ದುಃಖವಾಗುವುದು. ಉಪಭೋಗದಿಂದ ದೊರಕಬೇಕಾದಷ್ಟು ಆನಂದ ಉಂಟಾಗದಿರುವುದರಿಂದ ಸಂಗ ದುಃಖ, ದುಃಖದ ವಿನಃ ಯಾವ ಅನುಭವವು ಆಗುವುದಿಲ್ಲ ಇದೇ ಹಿಂಸಾ ದೋಷವಾಗಿದೆ. ಹೀಗೆ ಒಂದೊಂದು ವಿಷಯವು ಅದರ ದೋಷ ದರ್ಶನದಿಂದ ನಿವೃತ್ತಿ ಹೊಂದುವುದೇ ಪಂಚತುಷ್ಟಿಯಾಗಿದೆ.
ಹೀಗೆ ತುಷ್ಟಿಯು ೪ ಆಧ್ಯಾತ್ಮಿಕ ಮತ್ತು ೫ ಬಾಹ್ಯ ಸೇರಿ ೯ ಆಗಿದೆ.
೯ ತುಷ್ಟಿಯನ್ನು ಬೇರೆ ಬೇರೆ ಹೆಸರಿನಿಂದ ಕೂಡ ಕರೆಯಲಾಗುವುದು.
ಪೂರ್ವದಲ್ಲಿ ಹೇಳಿದಂತೆ ತುಷ್ಟಿಯ ವಿಪರೀತದಿಂದ ಏನು ಅಶಕ್ತಿ ಉಂಟಾಗುವುದೋ ಅದನ್ನು ‘ಬುದ್ಧಿ ಬುಧ ‘ ಎನ್ನುವರು.
ಸಿದ್ಧಿ ಎಂದರೇನು ? ಅದು ಹೇಗೆ ಪ್ರಾಪ್ತಿಯಾಗುವುದು?