66. ರಂಗಸ್ಥ ಇತ್ಯುಪೇಕ್ಷಕ ಏಕ: ದೃಷ್ಟಾ ಅಹಂ ಇತಿ ಉಪರಮತಿ ಏಕಾ ।
ಸತಿ ಸಂಯೋಗೇs ಪಿ ತಯೋ: ಪ್ರಯೋಜನಂ ನಾಸ್ತಿ ಸರ್ಗಸ್ಯ ।।
ರಂಗದಲ್ಲಿ ಕುಳಿತಿರುವ ಪುರುಷ ಉಪೇಕ್ಷಕನಂತೆ ನೋಡುತ್ತಿರುವನು ಮತ್ತು ಅವನು ಏಕ(ಒಬ್ಬನೇ) . ಪ್ರಕೃತಿಯು ತನ್ನನ್ನು ಪುರುಷನು ಕಂಡನು ಎಂದು ತಿಳಿದು ಕೊಳ್ಳುತ್ತಾಳೆ. ನೋಡುವ ಪುರುಷನಿದ್ದು, ನೋಡುವ ವಿಷಯವಿದ್ದು, ಎರಡರ ಸಂಯೋಗವಿದ್ದರೂ ಕೂಡ ಈ ಸೃಷ್ಟಿಯ ಏನು ಪ್ರಯೋಜನವಿಲ್ಲ.
ಇಲ್ಲಿ ಕೆಲವು ವಿಚಾರವನ್ನು ಗಮನದಲ್ಲಿರಿಸಬೇಕು. ನೋಡುವ ಪುರುಷನು ಒಬ್ಬನೇ ಎಂದರೆ ಯಾವ ಪುರುಷನಿಗೆ ಮೋಕ್ಷ ದೊರಕಿದೆಯೋ ಆತ ನೆಂದರ್ಥ. ಸಾಂಖ್ಯಾ ದರ್ಶನದಲ್ಲಿ ಪುರುಷ ಬಹುತ್ವವನ್ನು ಸ್ವೀಕರಿಸಿರುತ್ತೇವೆ.
ಈ ನಾನಾ ಪುರುಷರಿಗೆ ಪ್ರಕೃತಿಯು ಒಂದೇ ಕಾರಣ ಒಂದೇ, ಪ್ರಕೃತಿಯಲ್ಲಿ ಭೇದವಿಲ್ಲ.
ಜ್ಞಾನವಾದ ಪುರುಷನು ಹೇಗಿರುತ್ತಾನೆ?
67. ಸಮ್ಯಗ್ -ಜ್ಞಾನ-ಅಧಿಗಮಾದ್ ಧರ್ಮಾದೀನಾಂ ಅಕರಣ-ಪ್ರಾಪ್ತೌ ।
ತಿಷ್ಠತಿ ಸಂಸ್ಕಾರವಶಾತ್, ಚಕ್ರಭ್ರಮಿವದ್ ಧೃತ ಶರೀರ: ।।
ಪಂಚವಿಂಶತಿ ತತ್ವಜ್ಞಾನವೇ ಸರಿಯಾದ ಜ್ಞಾನವು, ಜ್ಞಾನವಾದ ಮೇಲೂ ಸಂಸ್ಕಾರವಶಾತ್ ಯೋಗಿಯು ಶರೀರ ಧಾರಣೆ ಮಾಡಿಕೊಂಡಿರುವನು. ಹೇಗೆಂದರೆ ಚಕ್ರಭ್ರಮದ ರೀತಿ, ಅಂದರೆ ಮಡಿಕೆ ಮಾಡಿದ ಮೇಲೂ ಚಕ್ರವು ತಿರುಗುತ್ತಿರುವಂತೆ.
ಯಾರಿಗೆ ಸಮ್ಯಗ್ -ಜ್ಞಾನ ವಾಗಿದೆ, ಧರ್ಮ ಇತ್ಯಾದಿಯ ಯಾವ ಕಾರಣವೂ ಇಲ್ಲದಾಗಿದ್ದರೂ ಈ ಸಪ್ತರೂಪವು ಹುರಿದ ಬೀಜದಂತಾಗಿರುತ್ತದೆ.
ಜ್ಞಾನವು ಅನಾಗತ ಕರ್ಮವನ್ನು ಅಳಿಸಿ ಹಾಕುವುದು. ಆದರೆ ವರ್ತಮಾನದ ಪ್ರಾರಬ್ಧ ಕರ್ಮವು ಹಾಗೆಯೇ ಇರಿವುದರಿಂದ ಜ್ಞಾನವಾದ ಯೋಗಿಯು ಶರೀರ ಧಾರಣೆ ಮಾಡುವನು. ಯಾವಾಗ ಈ ಸಂಸ್ಕಾರವು ಕ್ಷಯವಾಗುವುದೋ ಆಗ ಶರೀರವು ಬೀಳುತ್ತದೆ.
68. ಪ್ರಾಪ್ತೇ ಶರೀರ ಭೇದ ಚರಿತಾರ್ಥತ್ವಾತ್ ಪ್ರಧಾನ ವಿನಿವೃತೌ ।
ಐಕಾಂತಿಕಮ್ ಆತ್ಯಂತಿಕಮ್ ಉಭಯಮ್ ಕೈವಲ್ಯ೦ ಆಪ್ನೋತಿ ।।
ಧರ್ಮ-ಅಧರ್ಮದ ಕಾರಣದಿಂದ ಪ್ರಾಪ್ತವಾದ ಸಂಸ್ಕಾರವು ಕ್ಷಯವಾದಾಗ ಶರೀರದೊಂದಿಗೆ ಇರುವ ಸಂಬಂಧವು ನಶಿಸಿ ಹೋಗುವುದು.
ಮುಂದೆ ಪ್ರವೃತ್ತಿ ಹೊಂದಲು ಯಾವುದೇ ಸಂಸ್ಕಾರ ವಿಲ್ಲದರಿಂದ ಪ್ರಧಾನವು ನಿವೃತ್ತಿ ಹೊಂದುತ್ತದೆ.
ಈ ರೀತಿಯಾಗಿ ಮೊದಲೇ ಹೇಳಿದಂತೆ ಪುರುಷನು ಐಕಾಂತಿಕ ಮತ್ತು ಆತ್ಯಂತಿಕವಾದ ಕೇವಲವನ್ನು ಅಂದರೆ ಮೋಕ್ಷವನ್ನು ಹೊಂದುತ್ತಾನೆ.
69. ಪುರುಷಾರ್ಥ ಜ್ಞಾನಮಿದಂ ಗುಹ್ಯ೦ ಪರಮರ್ಷಿಣಾ೦ ಸಮಾಖ್ಯಾತಂ ।
ಸ್ಥಿತಿ-ಉತ್ಪತ್ತಿ-ಪ್ರಳಯಾಶ್ಚಿಂತ್ಯಂತೇ ಯತ್ರ ಭೂತಾನಾಂ ।।
ಈ ಪುರುಷಾರ್ಥ ಜ್ಞಾನವು ಗುಹ್ಯವು(ಗೋಪನಿಯ). ಇದನ್ನು ಪರಮರ್ಷಿ ಕಪಿಲರು ಹೇಳಿದ್ದಾರೆ.
ಭೂತದ ಸ್ಥಿತಿ-ಉತ್ಪತ್ತಿ-ಪ್ರಳಯ ಇವುಗಳ ಚಿಂತೆಯನ್ನು ಇಲ್ಲಿ ಮಾಡಲಾಗಿದೆ.
ಭಾಷ್ಯ ಸಮಾಪ್ತಿ ಶ್ಲೋಕ
70. ಸಾಂಖ್ಯ೦ ಕಪಿಲ ಮುನಿನಾ ಪ್ರೋಕ್ತ೦ ಸಂಸಾರ ವಿಮುಕ್ತಿ ಕಾರಣಂ ಹಿ ।